ಹೊಸಕೋಟೆ : ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳು ಕೌಟುಂಬಿಕ ಹಾಗೂ ಭೂಮಿ ವ್ಯಾಜ್ಯಗಳೇ ಆಗಿರುತ್ತವೆ. ಪ್ರಕರಣಗಳ ಇತ್ಯರ್ಥಕ್ಕಾಗಿ ವರ್ಷಾನುಗಟ್ಟಲೇ ಕದಾರರು ನ್ಯಾಯಾಲಯಕ್ಕೆ ಬರಬೇಕಾಗುತ್ತದೆ. ಇದನ್ನು ತಪ್ಪಿಸಲು ರಾಜಿ ಸಂದಾನದ ಮೂಲಕ ಪ್ರಕರಣ ಇತ್ಯರ್ಥ ಮಾಡಬಹುದಾಗಿದ್ದು, ಅದಕ್ಕಾಗಿ ಎರಡನೇ ಲೋಕ ಅದಾಲತ್ಅನ್ನು ಜುಲೈ 12ರಂದು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀಶೈಲ ಭೀಮಸೇನ ಬಗಾಡಿ ತಿಳಿಸಿದರು. ನಗರದ ನ್ಯಾಯಾಲಯದ ವಕೀಲರ ಸಂದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಜು.12ರಂದು ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಸದ್ಬಳಸಿಕೊಳ್ಳಬೇಕು ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಅರುಣ್ ಕುಮಾರ್ ಮಾತನಾಡಿದರು.
ಮೊದಲ ಲೋಕ ಅದಾಲತ್ನಲ್ಲಿ ಹೊಸಕೋಟೆಯಿಂದ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಎರಡನೇ ಲೋಕ ಅದಾಲತ್ಗೆ ವಕೀಲರ ಸಂದ ಸಂಪೂರ್ಣ ಬೆಂಬಲದೊಂದಿಗೆ ಇನ್ನು ಹೆಚ್ಚಿನ ಪ್ರಕರಣಗಳ ಇತ್ಯರ್ಥಕ್ಕೆ ಕ್ರಮವಹಿಸಲಾಗುವುದು. | ಕೆ.ರಮೇಶ್ ಅಧ್ಯಕ್ಷ, ಹೊಸಕೋಟೆ ತಾಲೂಕು ವಕೀಲರ ಸಂಘ