ಹಗರಿಬೊಮ್ಮನಹಳ್ಳಿಯಲ್ಲಿ ತಕ್ಷಶಿಲಾ ಬ್ಯಾಡ್ಮಿಂಟನ್ ಕ್ಲಬ್‌ನಿಂದ ಆಯೋಜಿಸಿದ್ದ ಇಂಟರ್ ಕ್ಲಬ್ ಬ್ಯಾಡ್ಮಿಂಟನ್ ಟೂರ್ನಾಮೆಂಟ್‌ನಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ತರಬೇತುದಾರರಾದ ಎಂ.ಸುಲೇಮನ್, ಆತಿಫ್, ಪ್ರಾಯೋಜಕರಾದ ಡಿ.ಎಚ್.ಕೆ ಶೇಕ್ ಅಹ್ಮದ್, ಮುಟಗನಹಳ್ಳಿ ಹನುಮಂತಪ್ಪ ಇತರರಿದ್ದರು. 
ಜಿಲ್ಲೆ

ಲೋಹಿತ್-ರಾಹುಲ್‌ಗೆ ಪ್ರಥಮ ಸ್ಥಾನ

ರುದ್ರಪ್ಪ ವಾಲಿ

ಲೋಹಿತ್-ರಾಹುಲ್‌ಗೆ ಪ್ರಥಮ ಸ್ಥಾನ

ಹಗರಿಬೊಮ್ಮನಹಳ್ಳಿ: ಪಟ್ಟಣದಲ್ಲಿ ತಕ್ಷಶಿಲಾ ಬ್ಯಾಡ್ಮಿಂಟನ್ ಕ್ಲಬ್‌ನಿಂದ ಐದನೇ ಇಂಟರ್ ಕ್ಲಬ್ ಬ್ಯಾಡ್ಮಿಂಟನ್ ಟೂರ್ನಾಮೆಂಟ್ ಸೋಮವಾರ ನಡೆಯಿತು.

14 ವರ್ಷದೊಳಗಿನ ಮೆನ್ಸ್ ಡಬಲ್ಸ್ ವಿಭಾಗದಲ್ಲಿ ಲೋಹಿತ್ ಹಾಗೂ ರಾಹುಲ್ ಮೊದಲ ಸ್ಥಾನ, ರಿಷಿ ಹಾಗೂ ಅಮಿತ್ ದ್ವಿತೀಯ ಸ್ಥಾನ ಪಡೆದರು. 19 ವರ್ಷದೊಳಗಿನವರ ಮೆನ್ಸ್ ಡಬಲ್ಸ್‌ನಲ್ಲೂ ಲೋಹಿತ್ ಹಾಗೂ ರಾಹುಲ್ ಪ್ರಥಮ ಸ್ಥಾನ ಪಡೆದರೆ ರಿಷಿ ಮತ್ತು ಆಕಾಶ ದ್ವಿತೀಯ ಸ್ಥಾನ ಪಡೆದರು.