ಹೂವಿನಹಡಗಲಿ : ಹುಬ್ಬಳಿ ಮೂಲದ ಗುತ್ತಿಗೆಧಾರ ಆನಂದ ಉಮೇಶ್ ಹೆಗಡೆ (40) ನೇಣಿಗೆ ಶರಣಾದ ಘಟನೆ ಪಟ್ಟಣದ ದಾಕ್ಷಾಯಿಣಿ ಲಾಡ್ಜ್‌ನಲ್ಲಿ ನಡೆದಿದೆ.
ಭಾನುವಾರ ಪಟ್ಟಣಕ್ಕೆ ಆಗಮಿಸಿ ದಾಕ್ಷಾಯಿಣಿ ಲಾಡ್ಜಿನ ರೂಮ್ ನಂಬರ್ 17 ರಲ್ಲಿ ಉಳಿದುಕೊಂಡಿದ್ದರು. ಭಾನುವಾರ ದಿಂದ ಮನೆಯವರು ಮೊಬೈಲ್ ಕರೆಮಾಡಿದರೂ ಸ್ವೀಕರಿಸದ ಕಾರಣ ಸಂಬಂಧಿಕರು ಲಾಡ್ಜ್ ಮಾಲೀಕರ ಮೊಬೈಲ್ ಸಂಖ್ಯೆ ಪಡೆದು ಕರೆ ಮಾಡಿ ವಿಚಾರಿಸಿದ್ದಾರೆ. ಬಳಿಕ ಲಾಡ್ಜ್ ಸಿಬ್ಬಂದಿ ರೂಮಿನ ಕಿಟಕಿಯಲ್ಲಿ ಗಮನಿಸಿದಾಗ ರೂಮಿನ ಕಿಟಕಿಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಕೂಡಲೇ ಲಾಡ್ಜ್ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.