ಮೈಸೂರು: ಮಾಡಲಿಂಗ್ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿರುವ ನಾಗೇಶ್ ಇದೀಗ ಕೃಷಿಕನಾಗಿ ಜಮೀನಿಗೆ ಇಳಿದಿದ್ದಾರೆ.
ಮಿಸ್ಟರ್ ಏಷ್ಯಾ ಎಂಬ ಕೀರ್ತಿ ಗಳಿಸಿದ್ದ ಮಾಡಲ್ ನಾಗೇಶ್ ಅವರು ಇದೀಗ ಚೆಂಡಯ ಹೂವು ಬೆಳೆಯುವ ರೈತನಾಗಿದ್ದಾರೆ. ಮೂಲತಃ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ನಿವಾಸಿಯಾಗಿರುವ ನಾಗೇಶ್, ಮಾಡಲಿಂಗ್ನಲ್ಲಿ ಖ್ಯಾತಿ ಗಳಿಸಿದ್ದಾರೆ.
ನೇಪಾಳದಲ್ಲಿ ನಡೆದ ಅಂತಾರಾಷ್ಟ್ರೀಯ ಫ್ಯಾಷನ್ ಶೋನಲ್ಲಿ ಭಾಗಿಯಾಗಿದ್ದರು. ಹಲವು ಕಡೆ ತೀರ್ಪುಗಾರನಾಗಿಯೂ ಕೆಲಸ ಮಾಡಿದ್ದಾರೆ. ಲಾಕ್‌ಡೌನ್ ಪರಿಣಾಮ ಫ್ಯಾಷನ್ ಶೋ ಅಥವಾ ಬೇರಾವುದೇ ಈವೆಂಟ್ ಇಲ್ಲದಿರುವುದರಿಂದ ಹುಟ್ಟೂರಿಗೆ ಬಂದು ತಂದೆಗೆ ನೆರವಾಗಿದ್ದಾರೆ.
ತಮ್ಮ ತೋಟದಲ್ಲಿ ನಾಗೇಶ್ ಅವರು ಚಂಡು ಹೂವು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಅವರ ಫೋಟೋಗಳು ವೈರಲ್ ಆಗಿದೆ. (ದಿಗ್ವಿಜಯ ನ್ಯೂಸ್)