ಜಿಲ್ಲೆ

ಸ್ಥಳ ಪರಿಶೀಲನೆ ನಡೆಸಿದ ಶಾಸಕ

ನರೇಶ್ ಕುಮಾರ್

ಸಿಂಧನೂರು: ನಗರದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ ವ್ಯಾಪಾರ ವಹಿವಾಟು ನಡೆಸಲು ಪರ್ಯಾಯ ವ್ಯವಸ್ಥೆ ಮಾಡುವ ದೃಷ್ಟಿಯಿಂದ ಶಾಸಕ ಹಂಪನಗೌಡ ಬಾದರ್ಲಿ ಬುಧವಾರ ವಿವಿಧೆಡೆ ಸ್ಥಳ ಪರಿಶೀಲನೆ ಮಾಡಿದರು.

ವಾರ್ಡ್ ನಂ.8ರಲ್ಲಿರುವ ಆಹಾರ ಇಲಾಖೆ ಗೋದಾಮು ಜಾಗ, ಸುಕೋಬ್ಯಾಂಕ್ ಹಿಂಬದಿ, ಪಿಡಬ್ಲ್ಯುಡಿ ಕ್ಯಾಂಪ್ ನೀರಾವರಿ ಇಲಾಖೆ ಜಾಗ ಸೇರಿದಂತೆ ಹಲವು ಕಡೆ ಸ್ಥಳ ವೀಕ್ಷಿಸಿದರು. ಆಹಾರ ಇಲಾಖೆ ಗೋದಾಮು ಜಾಗದಲ್ಲಿ ಸ್ವಚ್ಛತಾ ಕಾರ್ಯ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ಜೆಇ ಶಾಂತಕುಮಾರ, ನಗರಸಭೆ ಸದಸ್ಯ ಜಿಲಾನಿ ಪಾಷಾ ಇತರರಿದ್ದರು.