ಕೂಡ್ಲಿಗಿಯ ತಾಲೂಕು ಆಡಳಿತ ಸೌಧದ ಕಾಂಪೌಂಡ್ ನಿರ್ಮಾಣಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ತಹಸೀಲ್ದಾರ್ ಎಂ.ರೇಣುಕಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನ ಗೌಡ, ಪಪಂ ಸದಸ್ಯ ಕಾವಲಿ ಶಿವಪ್ಪನಾಯಕ, ಬಿ.ಕೆ.ರಾಘವೇಂದ್ರ, ಸುನೀಲ್ ಪಾಟೀಲ್ ಇದ್ದರು. 
ಜಿಲ್ಲೆ

ಸ್ಥಳ ಗುರುತಿಸಿ ನಮ್ಮ ಕ್ಲಿನಿಕ್ ಆರಂಭಿಸಿ

Kopala - Desk - Eraveni

ಕೂಡ್ಲಿಗಿ: ತಾಲೂಕು ಆಡಳಿತ ಸೌಧದ ಕಾಂಪೌಂಡ್ ಅನ್ನು ಡಿಎಂಎಫ್ ಅನುದಾನ 10 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದು, ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಗುತ್ತಿಗೆದಾರರಿಗೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸೂಚಿಸಿದರು.

ಪಟ್ಟಣದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಬಳಿಕ ರಾಜೀವ್ ಗಾಂಧಿ ನಗರಕ್ಕೆ ಟಿಎಚ್‌ಒ ಎಸ್.ಪಿ.ಪ್ರದೀಪ್ ಕುಮಾರ್ ಅವರೊಂದಿಗೆ ತೆರಳಿ ಆರೋಗ್ಯ ಉಪಕೇಂದ್ರದಲ್ಲಿ ನಮ್ಮ ಕ್ಲಿನಿಕ್ ತೆರೆಯುವ ಬಗ್ಗೆ ಸಮಾಲೋಚನೆ ನಡೆಸಿದರು.

ಆದರೆ, ಅಲ್ಲಿ ತೆರೆಯಲು ಅವಕಾಶವಿಲ್ಲ ಎಂದು ಟಿಎಚ್‌ಒ ಮಾಹಿತಿ ನೀಡಿದರು. ಡೆಂಘೆ ಸೇರಿ ನಾನಾ ಸಾಂಕ್ರಾಮಿಕ ರೋಗಗಳು ಜಾಸ್ತಿಯಾಗಿರುವ ಕಾರಣ ಬೇರೆ ಸ್ಥಳ ಗುರುತಿಸಿ ಶೀಘ್ರವೇ ನಮ್ಮ ಕ್ಲಿನಿಕ್ ತೆರೆಯುವಂತೆ ಶಾಸಕ ತಿಳಿಸಿದರು.

ತದನಂತರ ಪಶು ಆಸ್ಪತ್ರೆ ಹಾಗೂ ಸಹಾಯಕ ನಿರ್ದೇಶಕರ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ, ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿದರು.

ತಹಸೀಲ್ದಾರ್ ಎಂ. ರೇಣುಕಾ, ಉಪ ತಹಸೀಲ್ದಾರ್ ಎಸ್.ಚಂದ್ರಶೇಖರ್, ಪಪಂ ಸದಸ್ಯ ಕಾವಲ್ಲಿ ಶಿವಪ್ಪ ನಾಯಕ, ಕೆ.ಈಶಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಡಾಣಿ ರಾಘವೇಂದ್ರ, ಡಿ.ಎಚ್.ದುರುಗೇಶ್, ಎಚ್.ವೀರಭದ್ರಪ್ಪ, ರಾಘವೇಂದ್ರ, ಬಸವರಾಜ, ಸುನೀಲ್ ಗೌಡ್ರು, ಜಿಲಾನ್, ರೆಹಮಾನ್, ಪಿ.ಪ್ರಶಾಂತ್ ಇದ್ದರು.