????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????? 
ಜಿಲ್ಲೆ

ಎಂಎಸ್​ಐಎಲ್​ಗೆ ಸ್ಥಳಿಯರ ವಿರೋಧ

ಸೋಮಲಿಂಗ ತಳವಾರ

ಚನ್ನಮ್ಮನ ಕಿತ್ತೂರು: ಪಟ್ಟಣದ ರಾಣಿ ಚನ್ನಮ್ಮ ವರ್ತುಲ ಬಳಿ ತೆರೆಯಲು ಉದ್ದೇಶಿಸಿರುವ ಎಂಎಸ್​ಐಎಲ್​ (ಮದ್ಯದ ಅಂಗಡಿ) ವಿರೋಧಿಸಿ ಮಹಿಳೆಯರು ಹಾಗೂ ಸ್ಥಳಿಯ ನಿವಾಸಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

ಸ್ಥಳಿಯ ನಿವಾಸಿ ಡಾ.ಅನ್ನಪೂರ್ಣಾ ಅಂಗಡಿ ಮಾತನಾಡಿ, ಈ ಭಾಗದಲ್ಲಿ ನೂರಾರು ಕುಟುಂಬಗಳು ವಾಸವಾಗಿವೆ. ಅಲ್ಲದೆ ನಿತ್ಯ ಈ ಮಾರ್ಗವಾಗಿ ಮಕ್ಕಳು ಶಾಲಾ&ಕಾಲೇಜಿಗೆ ತೆರಳುತ್ತಾರೆ. ಹೀಗಾಗಿ, ಇಲ್ಲಿ ಮದ್ಯದ ಅಂಗಡಿ ಆರಂಭಿಸಿದರೆ ಕುಟುಂಬಗಳ ನೆಮ್ಮದಿ ಜೀವನಕ್ಕೆ ಭಂಗ ಉಂಟಾಗಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಚನ್ನಮ್ಮಾಜಿಯ ಪ್ರತಿಮೆ ವರ್ತುಲದ ಬಳಿಯೇ ಮದ್ಯದ ಅಂಗಡಿ ತೆರೆಯಲು ಉದ್ದೇಶಿಸಿರುವುದು ಚನ್ನಮ್ಮಾಜಿಗೆ ಮಾಡುತ್ತಿರುವ ಅವಮಾನವಾಗಿದೆ. ಜನರ ವಿರೋಧದ ಮಧ್ಯೆಯೂ ಮದ್ಯದ ಅಂಗಡಿ ತೆರೆದರೆ ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಜಿಪಂ ಮಾಜಿ ಉಪಾಧ್ಯ ಯಲ್ಲಪ್ಪ ವಕ್ಕುಂದ, ಶೇಖರ ಕೋಟಿ, ಮಹೇಶ ಪೂಜೇರ ಎಚ್ಚರಿಸಿದರು.

|ರಾಚಪ್ಪ ಸಂಗೊಳ್ಳಿ, ಮಂಜುನಾಥ ಸಂಗಣ್ಣವರ, ಸುಭಾಸ ಪಾಟೀಲ, ಜಗದೀಶ ಕಡೋಲಿ, ಎಂ.ಎಂ.ಲಂಗೋಟಿ, ಶಾಹೀದ್​ ಕುಂದಗೋಳ, ಪೈರೋಜ ಲಂಗೋಟಿ, ಎಸ್​.ಬಿ.ಹೊಳಿ, ನಾಗರತ್ನಾ ನವಲನವರ, ವಿಜಯಾ ಪಾಟೀಲ, ಜುಬೀನ್​ ಕುಂದಗೋಳ, ಬಾಗ್ಯಶ್ರೀ ಹೊಳಿ, ಅಶ್ವಿನಿ ಸಂಗಣ್ಣವರ, ಕಮಲಾ ಅಂಗಡಿ, ಅಯೇಷಾ ಲಂಗೋಟಿ, ಸೌಮ್ಯ ಸಂಗಣ್ಣವರ, ಕಾಲಿಬಾಯಿ ಬೆಳವಡಿ, ಸಲಿಂ ಕಿತ್ತೂರು, ಇಮ್ರಾನ್​ ಬೀಡಿ ಇತರರಿದ್ದರು.