ನಂದಗುಡಿಯ ಅಂಬೇಡ್ಕರ್​ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ಸಭೆಯಲ್ಲಿ ಗ್ರಾಪಂ ಉಪಾಧ್ಯೆ ಮಜರ್​ ಉನ್ನಿಸಾ, ಎಸ್​ಎಫ್​ಸಿಎಸ್​ ನಿರ್ದೇಶಕ ಧಮೇರ್ಶ್​, ಆರೋಗ್ಯಾಧಿಕಾರಿ ಡಾ.ಭಾಸ್ಕರ್​ ರೆಡ್ಡಿ, ಪಶುವೈದ್ಯ ಇಲಾಖೆ ಚಂದ್ರಶೇಖರ್​ ಇತರರು ಇದ್ದರು. 
ಜಿಲ್ಲೆ

ಹಾಸ್ಟೆಲ್​ಗಳಲ್ಲಿ ಸ್ಥಳಿಯರ ದಾಖಲಾತಿ ಕ್ಷೀಣ

ಬೆಂಗಳೂರು ಗ್ರಾಮಾಂತರ ಡೆಸ್ಕ್

ನಂದಗುಡಿ : ಹೊಸಕೋಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಇಲಾಖೆ ವ್ಯಾಪ್ತಿಯಲ್ಲಿ 8 ವಸತಿ ನಿಲಯಗಳಿವೆ. ಬೇರೆ ಜಿಲ್ಲೆಗಳಿಂದ ಬಂದು ವಸತಿ ನಿಲಯಕ್ಕೆ ದಾಖಲಾಗುತ್ತಿದ್ದು, ತಾಲೂಕಿನ ವಿದ್ಯಾರ್ಥಿಗಳೇ ದಾಖಲಾಗದಿರುವುದು ಬೇಸರದ ಸಂಗತಿ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು ಹೇಳಿದರು.

ನಂದಗುಡಿಯ ಅಂಬೇಡ್ಕರ್​ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಮಾತನಾಡಿದ ಅವರು, ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾದ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ 2025&26ನೇ ಸಾಲಿನಲ್ಲಿ ಇಲಾಖೆಯಿಂದ 75,000 ರೂಪಾಯಿ, ಉನ್ನತ ಶ್ರೇಣಿಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ 15 ಸಾವಿರ, ಪಿಯುಸಿಗೆ 20 ಸಾವಿರ, ಪದವಿಗೆ 25 ಸಾವಿರ, 30 ಸಾವಿರ, ಎಂಬಿಬಿಎಸ್​ ವಿದ್ಯಾರ್ಥಿಗಳಿಗೆ 50 ಲಕ್ಷ ರೂ., ವಿದೇಶದಲ್ಲಿ ವ್ಯಾಸಾಂಗ ಮಾಡುವ ವಿದ್ಯಾರ್ಥಿಗಳಿಗೆ 2 ಕೋಟಿ ರೂ. ವಿದ್ಯಾರ್ಥಿ ವೇತನ ನೀಡಲಿದೆ ಎಂದರು.

ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಗ್ರಾಮಸಭೆಗಳು ಉಪಯುಕ್ತವಾಗಿವೆ ಎಂದು ಪಿಡಿಒ ಕೆಂಪಣ್ಣ ಹೇಳಿದರು. ಫಲಾನುಭವಿಗಳು ಗ್ರಾಪಂಗೆ ಖುದ್ದಾಗಿ ಹಾಜರಾಗಿ ಕಂದಾಯ, ಕೃಷಿ, ತೋಟಗಾರಿಕೆ, ಶಿಕ್ಷಣ, ಆರೋಗ್ಯ, ಪಶುಸಂಗೋಪನೆ, ಸಮಾಜ ಕಲ್ಯಾಣ, ರೇಷ್ಮೆ, ನಿವೇಶನ ರಹಿತರಿಗೆ ಅರ್ಜಿ ಸಲ್ಲಿಸಲು, ಇ&ಸತ್ತು ಆಂದೋಲನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೊಟ್ಟಿಗೆ, ಕುರಿ ಶೆಡ್​ ನಿರ್ಮಿಸಲು ಅರ್ಜಿ ಸಲ್ಲಿಸಬಹುದು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಧ್ಯಾ, ತೋಟಗಾರಿಕೆ ಇಲಾಖೆ ಪವಿತ್ರಾ, ಬಿಸಿಎಂ ವ್ಯವಸ್ಥಾಪಕ ಬೈರಾರೆಡ್ಡಿ, ಉಪ&ಪ್ರಾಂಶುಪಾಲೆ ಶುಭಾ, ಗ್ರಾಪಂ ಸದಸ್ಯರಾದ ವೀರರಾಜ್​, ಎನ್​.ಎನ್​. ಮಂಜುನಾಥ್​, ಸುನೀತಾ ರಾಮೇಗೌಡ, ಜಯರಾಮಯ್ಯ, ನಾರಾಯಣಸ್ವಾಮಿ, ಅಯೂಬ್​ ಬೇಗ್​, ಅನುರಾಧ ನಟರಾಜ್​, ಶಾಂತಮ್ಮ ಹನುಮಂತಪ್ಪ, ಕಾರ್ಯದರ್ಶಿ ವೆಂಕಟೇಶ್​, ಲೆಕ್ಕಾಧಿಕಾರಿ ಸಂಪತ್​ ಕುಮಾರ್​, ಕರವಸುಲಿಗಾರ ಮನೋಜ್​, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.

ಬಿತ್ತನೆ ಬೀಜಕ್ಕೆ ರಿಯಾಯಿತಿ : ಮುಂಗಾರು ಪ್ರಾರಂಭವಾಗಿದ್ದು, ಇಲಾಖೆಯಿಂದ ರಾಗಿ ತಳಿ ಎಂಆರ್​&1,6, ತೊಗರಿ ಬಿಆರ್​ಜಿ&1,3,5, ಅಲಸಂದಿ&ಬಿಸಿ15, ತಳಿಗಳ ಬಿತ್ತನೆ ಬೀಜಗಳು ಲಭ್ಯ ಇವೆ, ಎಸ್ಸಿ,ಎಸ್ಟಿ ಫಲಾನುಭವಿಗಳಿಗೆ ಶೇ.75, ಸಾಮಾನ್ಯರಿಗೆ ಶೇ. 50 ರಿಯಾಯಿತಿ ಸಿಗಲಿದೆ. ತೊಗರಿ ಬೆಳೆ ವಿಮೆಗೆ ನೋಂದಾಯಿಸಲು ಜು.15 ಕೊನೆಯ ದಿನ ಹಾಗೂ ರಾಗಿ ಬೆಳೆಗೆ ಆ.16 ಕೊನೆಯ ದಿನವಾಗಿದೆ. ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡ ನಿರ್ಮಿಸಲು ಸಾಮಾನ್ಯ ಶೇ.80, ಎಸ್ಸಿ,ಎಸ್ಟಿ ಶೇ.90 ಪ್ಯಾಕೇಜ್​ ಮಾದರಿಯಲ್ಲಿ ನೀಡಲಾಗುತ್ತಿದೆ ಎಂದು ಕೃಷಿ ಇಲಾಖೆ ನೋಡಲ್​ ಅಧಿಕಾರಿ ಮೋಹನ್​ ಕುಮಾರ್​ ಮಾಹಿತಿ ನೀಡಿದರು.