ರಾಯಚೂರು ನಗರಸಭೆಯ 12ನೇ ವಾರ್ಡ್‌ನ ಸದಸ್ಯತ್ವ ಸ್ಥಾನಕ್ಕೆ ಬುಧವಾರ ಜರುಗಿದ ಮತದಾನ ಪ್ರಕ್ರಿಯೆಯಲ್ಲಿ ಮಹಿಳೆಯರು ಮತ ಚಲಾಯಿಸಲು ಸಾಲಾಗಿ ನಿಂತಿರುವುದು. 
ಜಿಲ್ಲೆ

ಶಾಂತಿಯುತವಾಗಿ ಜರುಗಿದ ಸ್ಥಳೀಯ ಸಂಸ್ಥೆ ಚುನಾವಣೆ

ರಾಚಯ್ಯ ಸ್ವಾಮಿ

ರಾಯಚೂರು: ಜಿಲ್ಲೆಯ ರಾಯಚೂರು ಮತ್ತು ಸಿಂಧನೂರು ನಗರಸಭೆ, ದೇವದುರ್ಗ ಪುರಸಭೆಯ ತಲಾ ಒಂದು ತೆರವಾಗಿರುವ ಸ್ಥಾನಗಳಿಗೆ ಬುಧವಾರ ಜರುಗಿದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಜರುಗಿದೆ.
ರಾಯಚೂರು ನಗರಸಭೆಯ 12ನೇ ವಾರ್ಡ್ ಸದಸ್ಯ ಸ್ಥಾನಕ್ಕೆ ಬೆಳಗ್ಗೆ 7 ರಿಂದ ಸಂಜೆ 5ರವರೆಗೆ ಮತದಾನ ಪ್ರಕ್ರಿಯೆ ನಡೆಸಲಾಗಿದ್ದು, ಐದು ಮತಗಟ್ಟೆಗಳಲ್ಲಿ ತುರುಸಿನ ಮತದಾನ ನಡೆದಿತ್ತು. ಒಟ್ಟು 5,528 ಮತದಾರರಲ್ಲಿ 3,622 ಪುರುಷ ಹಾಗೂ 1,511 ಮಹಿಳಾ ಮತದಾರರು ಸೇರಿದಂತೆ ಒಟ್ಟು 3,144 ಜನರು ಮತದಾನ ಮಾಡಿದ್ದು, ಶೇ.56.87ರಷ್ಟು ಮತದಾನವಾಗಿದೆ.
ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಪವನಕುಮಾರ, ಜೆಡಿಎಸ್‌ನಿಂದ ಎಂ.ಎ.ರಹೀಮ್, ಪಕ್ಷೇತರ ಅಭ್ಯರ್ಥಿಯಾಗಿ ನೂರ್ ಪಾಷಾ ಸ್ಪರ್ಧೆಯಲ್ಲಿದ್ದಾರೆ. ಅಪರ ಜಿಲ್ಲಾಕಾರಿ ಡಾ.ಕೆ.ಆರ್.ದುರಗೇಶ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.