ಬಳ್ಳಾರಿಯಲ್ಲಿ ಮಸಣ ಕಾರ್ಮಿಕರ ಜಿಲ್ಲಾ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.  
ಜಿಲ್ಲೆ

ಸ್ಥಳೀಯ ಸಂಸ್ಥೆಗಳ ನೌಕರರನ್ನಾಗಿ ಪರಿಗಣಿಸಲು ಆಗ್ರಹಿಸಿ ಬಳ್ಳಾರಿಯಲ್ಲಿ ಮಸಣ ಕಾರ್ಮಿಕರ ಪ್ರತಿಭಟನೆ

ಬಳ್ಳಾರಿ: ಮಸಣ ಕಾರ್ಮಿಕರ ಗಣತಿ ಜತೆಗೆ ಅವರನ್ನು ಸ್ಥಳೀಯ ಸಂಸ್ಥೆಗಳ ನೌಕರರನ್ನಾಗಿ ನೇಮಕ ಮಾಡಬೇಕೆಂಬುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಸಣ ಕಾರ್ಮಿಕರ ಜಿಲ್ಲಾ ಸಮಿತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಅಂತ್ಯಕ್ರಿಯೆಗೆ ಗುಂಡಿ ಅಗೆಯಲು ಸುರಕ್ಷತಾ ಪರಿಕರಗಳು ಹಾಗೂ ಸಲಕರಣೆಗಳನ್ನು ನೀಡಬೇಕು. ಗುಂಡಿ ಅಗೆಯುವ ಕೆಲಸವನ್ನು ಉದ್ಯೋಗ ಖಾತ್ರಿ ಕಾಮಗಾರಿ ಎಂದು ಪರಿಗಣಿಸಿ 3500 ರೂ. ಕೂಲಿ ನೀಡಬೇಕು. ಕಟ್ಟಡ ಕಾರ್ಮಿಕರೆಂದು ಪರಿಗಣಿಸಿ ಕಟ್ಟಡ ಕಾರ್ಮಿಕರ ಸೌಲಭ್ಯ ಕಲ್ಪಿಸಬೇಕು. ಮಸಣಗಳಿಗೆ ತಂತಿ ಬೇಲಿ ಇಲ್ಲವೇ ಕಾಂಪೌಂಡ್ ನಿರ್ಮಿಸಿ ಒತ್ತುವರಿ ತೆರವು ಮಾಡಬೇಕು. ಮಸಣ ಕಾರ್ಮಿಕರಾಗಿ ದುಡಿದಿರುವ ವೃದ್ಧರಿಗೆ ಮಾಸಿಕ ಮೂರು ಸಾವಿರ ರೂ. ಪಿಂಚಣಿ, ಅಂತ್ಯೋದಯ ಪಡಿತರ ಚೀಟಿ, ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ, ನಿವೇಶನ, ಜಮೀನು ನೀಡಬೇಕೆಂದು ಒತ್ತಾಯಿಸಲಾಯಿತು. ಸಮಿತಿಯ ಜಿಲ್ಲಾ ಸಂಚಾಲಕಿ ಬಿ.ಮಾಳಮ್ಮ, ಮುಖಂಡರಾದ ಎ.ಸ್ವಾಮಿ, ರುದ್ರಪ್ಪ, ಲಿಂಗರಾಜು, ಲಿಂಗಪ್ಪ, ಭೀಮಣ್ಣ ಇತರರಿದ್ದರು.