ಹೇರೂರು ಪಿಎಸಿಎಸ್ ಸದಸ್ಯರ ವಾರ್ಷಿಕ ಸಭೆಯಲ್ಲಿ ಕ್ರೀಡಾ ಸಾಧಕಿ ಅಪರ್ಣಾ ಅವರನ್ನು ಗೌರವಿಸಲಾಯಿತು. ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ, ಸಂಜೀವ, ನಾಗೇಶ್ ಅಮೀನ್, ವಿಶ್ವನಾಥ್ ಇತರರಿದ್ದರು. 
ಜಿಲ್ಲೆ

ಗೊಬ್ಬರ ಖರೀದಿಗೆ ರೈತರಿಗೆ ಸಾಲ

ಯಪುರ: ಬದಲಾಗುತ್ತಿರುವ ಹವಾಮಾನದಿಂದಾಗಿ ಬೆಳೆ ನಷ್ಟ, ಗುಡ್ಡ ಕುಸಿತದಿಂದಾಗಿ ರೈತ ಸಂಕಷ್ಟದಲ್ಲಿದ್ದಾನೆ. ಹಾಗಾಗಿ ಸದಸ್ಯರೆಲ್ಲರ ಅಪೇಕ್ಷೆಯಂತೆ ರೈತರಿಗೆ ಎರಡು ತಿಂಗಳವರೆಗೆ ಬಡ್ಡಿಯಿಲ್ಲದೆ ಗೊಬ್ಬರ ಖರೀದಿಗೆ ಸಾಲ ನೀಡಲು ಹೇರೂರು ಪಿಎಸಿಎಸ್ ತೀರ್ಮಾನಿಸಿದೆ ಎಂದು ಅಧ್ಯಕ್ಷ ಕುಕ್ಕುಡಿಗೆ ರವೀಂದ್ರ ಹೇಳಿದರು.

ಸೋಮವಾರ ಹೇರೂರು ಪಿಎಸಿಎಸ್ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಹೇರೂರು ಪಿಎಸಿಎಸ್ 2023-24 ನೇ ಸಾಲಿನಲ್ಲಿ 104 ಕೋಟಿ ರೂ. ವಹಿವಾಟು ನಡೆಸಿ, 25.66 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಲಾಭಕ್ಕಿಂತ ರೈತರ ಹಿತಾಸಕ್ತಿಗೆ ಆಡಳಿತ ಮಂಡಳಿ ಗಮನವಹಿಸಿ ಸಾಲಗಳ ಬಡ್ಡಿಯನ್ನು ಕಡಿಮೆ ಮಾಡಲಾಗಿದೆ. ಷೇರುದಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಚಿನ್ನಾಭರಣ ಸಾಲ, ವೈಯಕ್ತಿಕ ಸಾಲ ನೀಡಲಾಗುತ್ತಿದೆ. ಬೆಳೆ ವಿಮೆಯ ಕಂತು ಕಟ್ಟಲು ಸಾಧ್ಯವಾಗದ ಸಾಲಗಾರ ರೈತರ ವಿಮಾ ಕಂತನ್ನು ಸಂಘವೇ ತುಂಬಿದ್ದು, ಸಾಲ ಮರು ಪಾವತಿ ವೇಳೆ ಮರು ಪಾವತಿಸಲು ಅವಕಾಶ ಮಾಡಿಕೊಡಲಾಗಿದೆ. 2023-24ರ ಸಾಲಿಗೆ ಷೇರುದಾರರಿಗೆ ಶೇ.8 ಲಾಭಾಂಶ ನೀಡಲು ತೀರ್ಮಾನಿಸಿದೆ ಎಂದರು.
ಎನ್.ಎ.ಸಂಜೀವ ಮಾತನಾಡಿ, 22.58 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದ್ದು, 20.11 ಕೋಟಿ ರೂ.ಸಾಲ ನೀಡಿದೆ. ಎಂದರು.
ಹೊಸ ಷೇರುದಾರ ಸದಸ್ಯರನ್ನು ಸೇರಿಸಿಕೊಳ್ಳಬೇಕು ಎಂದು ಸದಸ್ಯ ಶಶಾಂಕ್ ಹೇರೂರು ಒತ್ತಾಯಿಸಿದರು. ಯಶಸ್ವಿನಿ ಯೋಜನೆಗೆ ಮಣಿಪಾಲದ ಆಸ್ಪತ್ರೆಯಲ್ಲಿ ಅವಕಾಶವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಯಿತು. ರವೀಂದ್ರ ಮಾತನಾಡಿ, ರಾಜ್ಯದ ಇತರ 200 ಆಸ್ಪತ್ರೆಗಳಲ್ಲಿ ಯಶಸ್ವಿನಿ ಯೋಜನೆಯಲ್ಲಿ ಚಿಕಿತ್ಸೆಗೆ ಅವಕಾಶವಿದೆ ಎಂದು ತಿಳಿಸಿದರು.
ಕ್ರೀಡಾ ಸಾಧಕಿ ಅಪರ್ಣಾ, ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳು ಹಾಗೂ ಉತ್ತಮ ವ್ಯವಹಾರ ನಡೆಸಿದ ಷೇರುದಾರರನ್ನು ಸನ್ಮಾನಿಸಲಾಯಿತು.
ಉಪಾಧ್ಯಕ್ಷ ಚಂದ್ರೇಗೌಡ, ನಿರ್ದೇಶಕರಾದ ನಾಗೇಶ್ ಅಮೀನ್, ಕೆ.ಪಿ.ರಂಗಪ್ಪಗೌಡ, ಅಣ್ಣಪ್ಪ ಗೌಡ, ವೀಣಾ ಭಾಸ್ಕರ್, ನಟರಾಜ್, ವಿನೋದಾ, ರಾಮಪ್ಪ, ರಾಮಯ್ಯ, ಸಿಇಒ ವಿಶ್ವನಾಥ್ ಇದ್ದರು.