ಜಿಲ್ಲೆ

ಬಡ ಮಹಿಳೆಯರಿಗೆ ಸಾಲ ಯೋಜನೆ ಸಹಕಾರಿ

Kodagu

ಸುಂಟಿಕೊಪ್ಪ: ಬಡ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸಲು ಸ್ವಸಹಾಯ ಸಂಘಗಳಿಂದ ನೀಡಲಾಗುವ ಸಾಲ ಯೋಜನೆ ಸಹಕಾರಿ ಎಂದು ಕೈಗಾರಿಕೋದ್ಯಮಿಗಳು ಮತ್ತು ವೃತ್ತಿ ನಿರತರ ವಿವಿಧೋದ್ದೇಶ ಸಹಕಾರ ಸಂಘದ ಕುಶಾಲನಗರ ಘಟಕದ ಅಧ್ಯಕ್ಷ ಟಿ.ಆರ್.ಶರವಣ ಹೇಳಿದರು.

ಇಲ್ಲಿನ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಲ ಯೋಜನೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ಸಹಕಾರ ಸಂಘಗಳು ಮಹಿಳಾ ಸಬಲೀಕರಣಕ್ಕಾಗಿ ಸಾಲ ಸೌಲಭ್ಯ ಒದಗಿಸುತ್ತವೆ. ಸ್ವಸಹಾಯ ಗುಂಪಿನವರು ಗುಂಪು ಯೋಜನೆಯಡಿ ವೈಯಕ್ತಿಕವಾಗಿ ವ್ಯಾಪಾರದಲ್ಲಿ ತೊಡಗಿಸಿಕೊಂಡು ಆರ್ಥಿಕವಾಗಿ ಚೇತರಿಕೆ ಕಂಡುಕೊಳ್ಳಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಸಂಘದ ಉಪಾಧ್ಯಕ್ಷ ಶಾಹಿರ್, ಸದಸ್ಯರಾದ ಸುರೇಶ್‌ಕುಮಾರ್, ಅಮೃತ್, ಬ್ಯಾಂಕ್‌ನ ವ್ಯವಸ್ಥಾಪಕರಾದ ಬಿ.ಡಿ.ಶ್ರೀಜೇಶ್, ಆರ್.ರಾಜ, ಜ್ಯೋತಿ ಹಾಗೂ ಸಿಬ್ಬಂದಿ ಇದ್ದರು.

ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಸ್ವಸಹಾಯ ಸಂಘಗಳ ಮಹಿಳೆಯರು, ವ್ಯವಹಾರದ ಮಾಹಿತಿ ಪಡೆದುಕೊಂಡರು.