ನರಗುಂದ: ಸಾಲ ವಸೂಲಾತಿ ವಿಳಂಬದಿಂದ ಸಹಕಾರಿ ಸಂಘಗಳ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ. ರೈತರು ನಿಗಧಿತ ಸಮಯದಲ್ಲಿ ಸಾಲ ಹಾಗೂ ಬಡ್ಡಿ ಪಾವತಿಸಿ ಸಂಘದ ಶ್ರೇಯೋಭಿವೃದ್ಧಿಗೆ ಸಹಕರಿಸಬೇಕು ಎಂದು ಮಾಜಿ ಸಚಿವ ಬಿ.ಆರ್. ಯಾವಗಲ್ ಹೇಳಿದರು.
ಪಟ್ಟಣದ ಎಫ್.ಎಸ್. ಪಾಟೀಲ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದ ಎಂ.ಎಸ್. ಪಾಟೀಲ ಹಾಗೂ ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಶೂನ್ಯ ಬಡ್ಡಿ ದರದಲ್ಲಿ ಸಾಲ ದೊರೆಯಬೆಕಾದರೆ ರೈತರು ನಿಗದಿತ ಸಮಯದೊಳಗೆ ಸಾಲ ಮರುಪಾವತಿ ಮಾಡಬೇಕು ಎಂದರು.
ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂ.ಎಸ್. ಪಾಟೀಲ ಮಾತನಾಡಿ, ಹಿಂದಿನ 4 ವರ್ಷದ ಅಧಿಕಾರವಧಿಯಲ್ಲಿ ಭೂ ಅಭಿವೃದ್ಧಿ, ಕುರಿ ಸಾಕಾಣಿಕೆ, ಟ್ರ್ಯಾಕ್ಟರ್, ಪಂಪ್‌ಸೆಟ್, ಹೈನುಗಾರಿಕೆಗೆ 6 ಕೋಟಿ ರೂ.ಸಾಲ ವಿತರಣೆ ಮಾಡಿ ಶೇ.78ರಷ್ಟು ಸಾಲ ವಸೂಲಾತಿ ಮಾಡಲಾಗಿದೆ. ಸರ್ಕಾರದಿಂದ ಹೆಚ್ಚುವರಿ ಅನುದಾನ ತಂದು ರೈತರ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ಸಾಲ ವಿತರಿಸಲಾಗುವುದು ಎಂದರು.
ರಾಷ್ಟ್ರೀಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿವೇಕ ಯಾವಗಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರವೀಣ ಯಾವಗಲ್,ದ್ಯಾಮಣ್ಣ ಸವದತ್ತಿ, ಚನ್ನಯ್ಯ ಹಿರೇಮಠ ಮಾತನಾಡಿದರು.
ಕೆ.ಬಿ. ಖಲೀಫ, ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಪ್ರಭುಲಿಂಗಪ್ಪ ಯಲಿಗಾರ, ಗುರುಪಾದಪ್ಪ ಕುರಹಟ್ಟಿ, ಉಮಾ ದ್ಯಾವನೂರ, ಲಕ್ಷ್ಮೀ ಕುದರಿ, ಬಾಪೂಗೌಡ ಹಿರೇಗೌಡ್ರ, ಟಿ.ಬಿ. ಶಿರಿಯಪ್ಪಗೌಡ್ರ, ಡಿ.ಡಿ. ಮಲ್ಲನಗೌಡ್ರ, ಟಿ.ಎಸ್. ಚನ್ನಪ್ಪಗೌಡ್ರ, ವಿಠಲ ತಿಮ್ಮರಡ್ಡಿ, ಸುರೇಶ ಸಾತನ್ನವರ, ಶಂಕರ ಸುರೇಬಾನ, ಬಿ.ಐ. ಕಡಕೋಳ, ರಂಜಾನಸಾಬ ನಧಾಫ, ದ್ಯಾಮಣ್ಣ ಕಾಡಪ್ಪನವರ ಇತರರಿದ್ದರು. ರವಿ ಯರಗಟ್ಟಿ ಸ್ವಾಗತಿಸಿದರು. ವೀರೇಶ ಚುಳಕಿ ನಿರೂಪಿಸಿದರು.