ಸೋಮವಾರಪೇಟೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಒಕ್ಕಲಿಗರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಹೆಚ್ಚು ಷೇರು ಪಡೆದ ಸಹಕಾರಿಗಳನ್ನು ಸನ್ಮಾನಿಸಿಲಾಯಿತು. ದೀಪಕ್, ಸುರೇಶ್, ಗಿರೀಶ್, ರವಿ, ಲೋಕೇಶ್ವರಿ ಇದ್ದರು 
ಜಿಲ್ಲೆ

ಮುಂದಿನ ದಿನಗಳಲ್ಲಿ ವಾಹನ, ಸೈಟ್ ಖರೀದಿಗೆ ಸಾಲ

ಸೋಮವಾರಪೇಟೆ: ಒಕ್ಕಲಿಗರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಶನಿವಾರ ಒಕ್ಕಲಿಗರ ಸಮುದಾಯ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ಜೆ.ದೀಪಕ್ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿತ್ತು.

2022ರಲ್ಲಿ ಪ್ರಾರಂಭವಾದ ಸಂಘದಲ್ಲಿ 277 ಸದಸ್ಯರಿದ್ದು, 17,42,000 ರೂ.ಪಾಲು ಬಂಡವಾಳವಿರುತ್ತದೆ. ನಿತ್ಯ ನಿಧಿ ಠೇವಣಿ ಸಾಲ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸದಸ್ಯರಿಗೆ ವಾಹನ, ಸೈಟ್ ಖರೀದಿಗೆ ಸಾಲ ನೀಡಲಾಗುತ್ತದೆ ಎಂದು ದೀಪಕ್ ಹೇಳಿದರು.

ಹೆಚ್ಚಿನ ಷೇರು ಖರೀದಿಸಿದ ನಿವೃತ್ತ ಡಿಎಫ್‌ಒ ಕೆ.ಕೆ.ಪೂವಯ್ಯ, ಅರುಣ್ ಕೊತ್ನಳ್ಳಿ, ತಾಕೇರಿ ಪ್ರಭುಕುಮಾರ್, ಹೊಸಬೀಡು ಪೃಥ್ವಿ, ತೋಳೂರುಶೆಟ್ಟಳ್ಳಿ ಮದನ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ರಾಜ್ಯ ಸೌಹರ್ದ ಸಂಯುಕ್ತ ಸಹಕಾರಿ ಸಂಘದ ಮೈಸೂರು ಪ್ರಾಂತೀಯ ಅಧಿಕಾರಿ ಗುರುಪ್ರಸಾದ್ ಬಂಗೇರಾ, ಅಭಿವೃದ್ಧಿ ಅಧಿಕಾರಿ ಆರ್.ಎಸ್.ಸುರೇಶ್ ಸಹಕಾರ ಸಂಘದ ನಿಯಮಗಳ ಬಗ್ಗೆ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಬಿ.ಸುರೇಶ್, ನಿರ್ದೇಶಕರುಗಳಾದ ಗಿರೀಶ್ ಮಲ್ಲಪ್ಪ, ಪಿ.ಕೆ.ರವಿ, ಎಚ್.ಎಸ್. ವಸಂತ್‌ಕುಮಾರ್, ಎಚ್.ಎಂ.ನತೀಶ್ ಮಂದಣ್ಣ, ಎಚ್.ಕೆ.ಪ್ರಸ್ಸಿ, ಜಿ.ಪಿ.ಕಿಶೋರ್ ಕುಮಾರ್, ಎಂ.ಲೋಕೇಶ್ವರಿ ಗೋಪಾಲ್, ಯು.ಎಲ್.ಸುಮಲತಾ, ಕಾರ್ಯದರ್ಶಿ ಕೆ.ಟಿ.ದಯಾನಂದ ಇದ್ದರು.