ಚನ್ನಗಿರಿ: ಬೀದಿ ಬದಿ ವ್ಯಾಪಾರಿಗಳನ್ನು ಆರ್ಥಿಕವಾಗಿ ಸಬಲೀಕರಣ ಮಾಡಲು, ಮತ್ತು ಅವರು ಸಮಗ್ರ ಅಭಿವೃದ್ಧಿ ಹೊಂದಲು ಸಾಲ ನೀಡಲಾಗುತ್ತಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಡಿ. ಕಟ್ಟಿಮನಿ ತಿಳಿಸಿದರು.
ಪಟ್ಟಣದ ಶ್ರೀ ರಾಘವೇಂದ್ರ ಸಮುದಾಯ ಭವನದಲ್ಲಿ ಗುರುವಾರ ದಾವಣಗೆರೆ ಜಿಲ್ಲಾಡಳಿತ, ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಪುರಸಭೆ ಸಹಯೋಗದಲ್ಲಿ ಪಿಎಂ ಸ್ವಾನಿಧಿ ಸೇ ಸಮೃದ್ಧಿ ಯೋಜನೆಯಡಿ ಬೀದಿ ಬದಿ ವ್ಯಾಪಾರಸ್ಥರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಬೀದಿ ವ್ಯಾಪಾರಿಗಳ ಅತ್ಮನಿರ್ಭರ ನಿಧಿ ಯೋಜನೆ ಪ್ರಾರಂಭಿಸಿದೆ. ಈ ಮೂಲಕ ಪಟ್ಟಣದ ವ್ಯಾಪಾರಿಗಳಿಗೆ ಒಂದು ವರ್ಷದ ಅವಧಿಯ 10 ಸಾವಿರವರೆಗಿನ ಮೇಲಾಧಾರ ಮುಕ್ತ ಸಾಲ ನೀಡುವ ಉದ್ದೇಶ ಹೊಂದಿದೆ.
ಪಟ್ಟಣದ ವ್ಯಾಪ್ತಿಯಲ್ಲಿ ವ್ಯವಹಾರ ನಡೆಸಲು ಮತ್ತು ಪುನರಾಂಭಿಸಲು ನೆರವಾಗುತ್ತದೆ. 2021-21ನೇ ಸಾಲಿನಲ್ಲಿ ಕೋವಿಡ್ ನಂತರ ಬೀದಿಬದಿ ವ್ಯಾಪಾರ ಮಾಡುವಂಥ ಕುಟುಂಬಗಳಿಗೆ ಸಾಮಾಜಿಕ ಭದ್ರತೆಗಾಗಿ ಎಲ್ಲ ತರಹದ ಸಹಾಯ ಮಾಡಲಾಗುತ್ತ್ತಿದೆ ಎಂದರು.
ಬೀದಿಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆ ಜಾರಿಗೆ ತರುವ ಮೂಲಕ ಸ್ವಾವಲಂಬಿಗಳಾಗಿ ಮಾಡುವ ಉದ್ದೇಶ ಹೊಂದಿದೆ. ಇದರ ಪ್ರಯೋಜನ ಪಡೆಯಬೇಕು ಎಂದರು.
ತಹಸೀಲ್ದಾರ್ ಜಿ.ಎಸ್. ಶಂಕರಪ್ಪ, ಪುರಸಭೆ ಸದಸ್ಯರಾದ ಲಕ್ಷಿ ್ಮೀದೇವಮ್ಮ, ಗಾದ್ರಿರಾಜು, ಮೊಟ್ಟೆ ಚಿಕ್ಕಣ್ಣ, ಪಟ್ಲಿ ನಾಗರಾಜ್, ಸವಿತಾ ರಾಘವೇಂದ್ರ, ಅಣ್ಣಪ್ಪ, ಪುರಸಭೆ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಆರ್‌ಒ ಮಂಜುನಾಥ್ ಇತರರು ಇದ್ದರು.