ಬೆಳಗಾವಿ: ಬೆಳಗಾವಿ ನಗರ, ಹೊರ ವಲಯದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಗರಿಬಿಚ್ಚಿದ್ದು,ಕೃಷಿ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸುತ್ತಿರುವುದು ಜಮೀನು ಮಾಲೀಕರು, ರೈತರಲ್ಲಿ ಆತಂಕ ಸೃಷ್ಟಿ ದೆ. ಈ ನಡುವೆ ಜಮೀನಿ ಮಾಲೀಕತ್ವಕ್ಕಾಗಿ ನಿರಂತರವಾಗಿ ಗಲಾಟೆ ನಡೆಯುತ್ತಿವೆ.
ಇದೀಗ ಬೆಳಗಾವಿ ತಾಲೂಕಿನ ಯಳ್ಳೂರ ಸುಳಗಾ ಗ್ರಾಮದಲ್ಲಿ ಅರ್ಧ ಎಕರೆ ಜಮೀನಿಗಾಗಿ ಎರಡು ಗುಂಪುಗಳ ನಡೆದ ಗಲಾಟೆ ಜನರಲ್ಲಿ ಮತ್ತಷ್ಟು ಆತಂಕ ಉಂಟು ಮಾಡಿದೆ.
ಗ್ರಾಮದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿಯೇ 15ಕ್ಕೂ ಅಧಿಕ ದುಷ್ಕರ್ಮಿಗಳು ತಲ್ವಾರ, ರಾಡ್‌ನಿಂದ ಏಕಾಏಕಿ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ.
ಯಳ್ಳೂರ ಬಳಿಯ ಸುಳಗಾ ಗ್ರಾಮದಲ್ಲಿ ಜಮೀನಿಗಾಗಿ ಅರವಿಂದ ಪಾಟೀಲ ಮತ್ರು ದರ್ಶನ ಪಾಟೀಲ ಎಂಬುರ ನಡುವೆ ಗಲಾಟೆ ನಡಡಯುತಿತ್ತು. ಗಲಾಟೆಯಲ್ಲಿ ಅರವಿಂದ ಪಾಟೀಲ ಗಾಯಗೊಂಡಿದ್ದಾರೆ. ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ಕೆಲ ದಿನಗಳ ಹಿಂದಷ್ಟೇ ಅರವಿಂದ ಪಾಟೀಲ ಪರ ಆದೇಶ ಹೊರಡಿಸಿರುವ ಡಿಸಿ, ಎಸಿ ಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಇನ್ನೊಂದು ಗುಂಪಿನಿಂದ ಕೋರ್ಟ್‌ಗೆ ಮೊರೆ ಹೊಗಿತ್ತು.ಡಿಸಿ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಸಿಗದಿದ್ದಾಗ ಅರವಿಂದ ಮೇಲೆ ಹಲ್ಲೆಗೆ ಯತ್ನ ಆರೋಪ ಕೇಳಿ ಬಂದಿದೆ. ರಿಯಲ್ ಎಸ್ಟೇಟ್ ದಂದೆಯೇ ಮೂಲ ಕಾರಣ ಎಂದು ಗ್ರಾಮೀಣ ಠಾಣೆ ಪೊಲೀಸರು ತಿಳಿಸಿದ್ದಾರೆ.