ಜಿಲ್ಲೆ

ಅಕ್ರಮವಾಗಿ ದನ ಕಡಿದವನ ವಿರುದ್ಧ ಎಫ್‌ಐಆರ್

ಹಾನಗಲ್ಲ: ಬಕ್ರೀದ್ ಹಬ್ಬದ ನಿಮಿತ್ತ ಅಕ್ರಮವಾಗಿ ದನ ಕಡಿದ ಆರೋಪದಡಿ ವ್ಯಕ್ತಿಯೊಬ್ಬನ ವಿರುದ್ಧ ಇಲ್ಲಿಯ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಸಾವಿಕೇರಿ ಗ್ರಾಮದ ಚಮ್ಮನಸಾಬ ನನ್ನೆಸಾಬ ಹೊಂಡದ (54) ಎಂಬುವನ ವಿರುದ್ಧ ಪ್ರಕರಣ ದಾಖಲಾಗಿರುವುದು.
ಈತ ಬಕ್ರೀದ್ ಹಬ್ಬದ ದಿನದಂದು ತನ್ನ ಮನೆಯ ಪಕ್ಕದ ಶಡ್ಡಿನಲ್ಲಿ ಅಕ್ರಮವಾಗಿ ದನ ಕಡಿದು ಅದನ್ನು ನಾಶ ಪಡಿಸಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.