ಇಳಕಲ್ಲ (ಗ್ರಾ): ತಮ್ಮ ಹೊಲಕ್ಕೆ ಹೋಗಲು ದಾರಿ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿ ವಾರದಿಂದ ರೈತರು ತಹಸೀಲ್ದಾರ್ ಕಚೇರಿ ಎದುರು ನಡೆಸುತ್ತಿದ್ದ ಆಮರಣ ಉಪವಾಸ ಸತ್ಯಾಗ್ರಹವನ್ನು ಬುಧವಾರ ಹಿಂಪಡೆದರು.
ಇಳಕಲ್ಲ ತಾಲೂಕು ತಹಸೀಲ್ದಾರ್ ವೇಸವ್ಯಾಸ ಮುತಾಲಿಕ ಈ ವಿಷಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ನ್ಯಾಯಾಲಯದಲ್ಲಿ ತೀರ್ಮಾನಿಸಿಕೊಳ್ಳುವಂತೆ ತಿಳಿಸಿದ್ದರಿಂದ ನಿರಶನಕ್ಕೆ ಕುಳಿತವರು ಸತ್ಯಾಗ್ರಹ ಮುಕ್ತಾಯಗೊಳಿಸಿದರು.
ಚಿತ್ತರಗಿ ವಿಜಯ ಮಹಾಂತೇಶ ಮಠದಲ್ಲಿ ಗುರುಮಹಾಂತ ಶ್ರೀಗಳ ಸಾನ್ನಿಧ್ಯದಲ್ಲಿ ನಡೆದ ಸಭೆಯಲ್ಲಿ ನಿರಶನಕ್ಕೆ ಕುಳಿತ ಮಲಕಾಜಗೌಡ ಪಾಟೀಲ, ಮಲ್ಲಮ್ಮ ಪಾಟೀಲ, ಬಸಮ್ಮ ಮೂಲಿಮನಿ, ಮಹಾಂತಗೌಡ ಪಾಟೀಲ, ಪಾರ್ವತಮ್ಮ ಪಾಟೀಲ, ನಾಗನಗೌಡ ಪಾಟೀಲ, ಪರಶುರಾಮ ಮೂಲಿಮನಿ, ಶಿವಾನಿ ಪಾಟೀಲ ಮತ್ತಿತರರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಶ್ರೀಗಳು ಮಾತನಾಡಿ, ತಾತ್ಕಾಲಿಕವಾಗಿ ಒಂದು ರಸ್ತೆಯನ್ನು ನಿರಶನ ಕುಳಿತ ಹೊಲದ ಮಾಲೀಕರಿಗೆ ಮಾಡಿಕೊಡುವ ವ್ಯವಸ್ಥೆ ಮಾಡಬೇಕು. ನಂತರದಲ್ಲಿ ಅವರು ನ್ಯಾಯಾಲಯದಲ್ಲಿ ತಮ್ಮ ವ್ಯಾಜ್ಯ ಮುಗಿಸಿಕೊಳ್ಳಬೇಕು ಎಂದು ಹೇಳಿದರು.
ಬಾಗಲಕೋಟೆ ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ಸಿಪಿಐ ಅಯ್ಯನಗೌಡ ಪಾಟೀಲ, ತಹಸೀಲ್ದಾರ್ ವೇದವ್ಯಾಸ ಮುತಾಲಿಕ, ಪಿಎಸ್‌ಐ ರಮೇಶ ಜಲಗೇರಿ, ರೈತ ಮುಖಂಡರಾದ ಮಲ್ಲನಗೌಡ ತುಂಬದ, ಗುರು ಗಾಣಿಗೇರ ಮತ್ತಿತರರು ಭಾಗವಹಿಸಿದ್ದರು.
EndFragment