ಜಿಲ್ಲೆ

ಮದ್ಯ ವ್ಯಸನದಿಂದ ಜೀವ, ಜೀವನ ಹಾಳು

ಹುಬ್ಬಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಇಲ್ಲಿನ ಉಣಕಲ್ ಗ್ರಾಮದಲ್ಲಿ 1706ನೇ ಮದ್ಯವರ್ಜನ ಶಿಬಿರವನ್ನು ಗುರುವಾರ ಉದ್ಘಾಟಿಸಲಾಯಿತು.

ಎಸಿಪಿ ಬಲ್ಲಪ್ಪ ನಂದಗಾವಿ ಉದ್ಘಾಟಿಸಿ ಮಾತನಾಡಿ, ಕುಡಿತವು ಮನುಷ್ಯನ ಜೀವನವನ್ನು ಹಾಳು ಮಾಡುತ್ತದೆ. ಕುಟುಂಬವನ್ನು ಬೀದಿಗೆ ತಂದಿರಿಸುತ್ತದೆ. ತಾನೂ ಹಾಳಾಗುವುದಲ್ಲದೇ ಸಮಾಜದಲ್ಲಿಯೂ ಹೀನ ಮನುಷ್ಯನನ್ನಾಗಿ ಮಾಡುತ್ತದೆ. ಈ ನಿಟ್ಟಿನಲ್ಲಿ ಮದ್ಯ ವ್ಯಸನಕ್ಕೆ ಯಾರೂ ಒಳಗಾಗಬಾರದು ಎಂದು ಸಲಹೆ ನೀಡಿದರು.

ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ರಾಜಣ್ಣ ಕೊರವಿ, ರಮೇಶ ಕಾಂಬಳೆ, ಮಲ್ಲಪ್ಪ ತಡಸದ, ಶಿಬಿರದ ಅಧ್ಯಕ್ಷ ಎಸ್.ಎಸ್. ಪಾಟೀಲ, ಡಾ ಸಜ್ಜನ, ಬಸವರಾಜ ಮಾಡಳ್ಳಿ, ಸಿದ್ದು ಮಾಯಣ್ಣನವರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ, ತಾಲೂಕು ಯೋಜನಾಧಿಕಾರಿ ಸುಧಾ ಗಾಂವ್ಕರ, ಪಿರಾಜೆ ಕಂಡೇಕರ, ಮಾರುತಿ ಶೇಟ್, ಇತರರು ಇದ್ದರು.