ಜಿಲ್ಲೆ

ಬದುಕಿನ ವಿವೇಕ ಕಲಿಸಿದ ಶರಣರು: ಜಾನಪದ ತಜ್ಞ ಈಶ್ವರಪ್ಪ ಹೇಳಿಕೆ

Davanagere

ದಾವಣಗೆರೆ: ಸ್ವಾಮಿ ವಿವೇಕಾನಂದರು ಯುವಜನರಿಗೆ ಗುರಿ ತಲುಪಲು ಮಾರ್ಗದರ್ಶನ ನೀಡಿದರು. ಶರಣರು ಬದುಕಿನ ವಿವೇಕವನ್ನು ಹೇಳಿಕೊಟ್ಟರು ಎಂದು ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ ಹೇಳಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದಿಂದ ನಗರದ ಎ.ಆರ್.ಜಿ. ಕಾಲೇಜಿನಲ್ಲಿ ಶನಿವಾರ, ರಾಷ್ಟ್ರೀಯ ಮತದಾರರ ದಿನಾಚರಣೆ ಮತ್ತು ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ವಿವೇಕಾನಂದರು ಯುವಜನರಿಗೆ ದಾರಿದೀಪವಾದವರು. ಹಿಂದು ಧರ್ಮವನ್ನು ವಿಶ್ವಕ್ಕೆ ಪರಿಚಯಿಸಿದವರು. ಭಾರತದಲ್ಲಿನ ನೋವು, ಸಂಕಟ, ಹಸಿವುಗಳನ್ನು ಅವರು ಗಮನಿಸಿದ್ದರು ಎಂದು ತಿಳಿಸಿದರು.

ಅಭಾಶಸಾಪ ಜಿಲ್ಲಾಧ್ಯಕ್ಷ ಚಿಕ್ಕೋಳ್ ಈಶ್ವರಪ್ಪ ಮಾತನಾಡಿ, ವಚನ ಸಾಹಿತ್ಯವು ಬದುಕಿನಲ್ಲಿ ಬರುವ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಯುವಜನರು ಮೊಬೈಲ್ ಗೀಳಿನಿಂದ ಹೊರಬಂದು ಶರಣರ ವಿಚಾರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾಲೇಜು ಆಡಳಿತ ಸಮಿತಿ ಅಧ್ಯಕ್ಷ ಎ.ಜಿ. ಮಂಜುನಾಥ್, ಪ್ರಾಂಶುಪಾಲ ಕೆ.ಎಸ್. ಬಸವರಾಜಪ್ಪ, ಸಾಹಿತಿ ಡಾ. ಪ್ರಕಾಶ ಹಲಗೇರಿ, ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ. ಅನಿತಾ ದೊಡ್ಡಗೌಡರ್, ಶಿವಾನಂದ ಗುರೂಜಿ ಭಾಗವಹಿಸಿದ್ದರು.

ವಚನ ಸಾಹಿತ್ಯ ವರ್ತಮಾನಕ್ಕೆ ಪ್ರಸ್ತುತ, ವಚನ ಸಾಹಿತ್ಯದ ಬೆಳಕಿನಲ್ಲಿ ಸಮಕಾಲೀನ ಸಮಸ್ಯೆಗಳ ಅವಲೋಕನ ವಿಷಯಗಳ ಕುರಿತು ಗೋಷ್ಠಿಗಳು ನಡೆದವು.