ಗುರುಗುಂಟಾ ಶ್ರೀ ಸದ್ಗುರು ಪೂಜಾವಧೂತರ ಮಠದಲ್ಲಿ ಆಯೋಜಿಸಿದ್ದ ಧರ್ಮ ಸಭೆಯಲ್ಲಿ ಸಂಸ್ಥಾನಿಕ ರಾಜಾಸೋಮನಾಥ ನಾಯಕ ಮಾತನಾಡಿದರು. ಪ್ರಮುಖರಾದ ಗೋವಿಂದ ನಾಯಕ, ನಂದೀಶ ನಾಯಕ, ಚನ್ನಯ್ಯಸ್ವಾಮಿ, ಮಲ್ಲಿಕಾರ್ಜುನ ಸ್ವಾಮಿ ಇತರರಿದ್ದರು. 
ಜಿಲ್ಲೆ

ಪರಸ್ಪರ ಪ್ರೀತಿ, ವಿಶ್ವಾಸದೊಂದಿಗೆ ಜೀವನ ನಡೆಸಿ

ಗುರುಗುಂಟಾ: ಮಾನವೀಯ ಮೌಲ್ಯ, ಧರ್ಮ, ಸಂಸ್ಕೃತಿ ಉಳಿಸಿ ಬೆಳೆಸಲು ಸತ್ಸಂಗ, ಅಧ್ಯಾತ್ಮ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ಸಂಸ್ಥಾನಿಕ ರಾಜಾಸೋಮನಾಥ ನಾಯಕ ಹೇಳಿದರು.

ಗ್ರಾಮದಲ್ಲಿ ಶ್ರೀ ಸದ್ಗುರು ಪೂಜಾವಧೂತರ ಪುಣ್ಯಾರಾಧನೆ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ಧರ್ಮಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.ಯುವಜನತೆ ದುಶ್ಚಟಗಳಿಂದ ದೂರವಿದ್ದು ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಜೀವನ ನಡೆಸಬೇಕು. ಶಾಸಕರ ಅನುದಾನದಡಿ ಮಠವನ್ನು ಅಭಿವೃದ್ಧಿಗೊಳಿಸಲಾಗುವುದು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದನಾಯಕ, ತಾಲೂಕು ವಾಲ್ಮೀಕಿ ನಾಯಕ ಸಂಘದ ಮಾಜಿ ಅಧ್ಯಕ್ಷ ನಂದೀಶ ನಾಯಕ, ಪ್ರಮುಖ ಆನಂದ ತುರ್ವಿಹಾಳ್ ಮಾತನಾಡಿದರು. ಗುರು ಅಮರಾನಂದ ಶಾಸ್ತ್ರಿ ಸಾನ್ನಿಧ್ಯ ವಹಿಸಿದ್ದರು.

ನೇತೃತ್ವವನ್ನು ಬೂದಿಹಾಳ ಪೂರ್ಣಾನಂದ ಆಶ್ರಮದ ಗಾಂಗೇಯ ಪೀಠದ ಮಹಾರಾಜರು, ಸಂಗಮೇಶ್ವರ ಶರಣರು, ಹನುಮಂತಪ್ಪ ಗುರುಗಳು, ಮೃತ್ಯುಂಜಯ ಶರಣರು, ಚನ್ನಯ್ಯಸ್ವಾಮಿ ಹೊರಪೇಟಮಠ, ಮಲ್ಲಿಕಾರ್ಜುನ ಕಳಸದಗುಡಿ, ಗ್ರಾಪಂ ಸದಸ್ಯ ಮೂರ್ತಿ ನಾಯಕ, ಸಪ್ರಾಶಾಲೆ ಎಸ್ಡಿಎಂಸಿ ಅಧ್ಯಕ್ಷ ವಿಜಯಕುಮಾರ ನಾಯಕ, ಹೋಮ್ ಗಾರ್ಡ್ ಹನುಮನಗೌಡ, ಪ್ರಮುಖರಾದ ಶಿವಪ್ಪ ಟೈಲರ್, ಈಶಪ್ಪ ಕೆಂಪ, ಹುಲುಗಪ್ಪ ಮಸರಕಲ್, ಹನುಮಂತ ಕೆಂಪ, ನಿಂಗಣ್ಣ, ತಿಪ್ಪಣ್ಣ, ಅಮರೇಶ ವಾಲಿಕಾರ್ ಇತರರಿದ್ದರು.