ಯಲಬುರ್ಗಾ ತಾಲೂಕಿನ ತರಲಕಟ್ಟಿ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಅವರಣದಲ್ಲಿ ಹಮ್ಮಿಕೊಂಡಿದ್ದ ಯುವಜನರಿಗೆ ಸಂವಿಧಾನ ಕುರಿತ ಜಾಗೃತಿ ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಕನಕಗಿರಿ ಉದ್ಘಾಟಿಸಿದರು. ಗ್ರಾಪಂ ಸದಸ್ಯ ಬಸಪ್ಪ ಕೊಳೂರು, ಪ್ರಮುಖರಾದ ಪ್ರಭುಗೌಡ ಪೊಲೀಸ್ ಪಾಟೀಲ್, ಶ್ರೀಕಾಂತಗೌಡ ಮಾಲಿಪಾಟೀಲ್, ಕರಿಯಪ್ಪ ಶಿಲ್ಪಿ, ತೋಟಪ್ಪ ಬೇವೂರು, ಬಸಯ್ಯ ಹಿರೇಮಠ, ಗವಿಸಿದ್ದಪ್ಪ ಹಳ್ಳಿ ಇತರರಿದ್ದರು. 
ಜಿಲ್ಲೆ

ಸಂವಿಧಾನದ ಆಶಯಕ್ಕೆ ಬದ್ಧರಾಗಿ ಜೀವಿಸಿ

ಯಲಬುರ್ಗಾ: ಸಂವಿಧಾನದ ಹಕ್ಕು ಮತ್ತು ಕರ್ತವ್ಯಗಳನ್ನು ಸರಿಯಾಗಿ ಅನುಷ್ಟಾನಗೊಳಿಸಿ ಸಂವಿಧಾನದ ಆಶಯಕ್ಕೆ ಬದ್ಧರಾಗಿ ಜೀವಿಸಬೇಕು ಎಂದು ಪ್ರೌಢಶಾಲೆ ಎಸ್‌ಡಿಎಂಸಿ ಅಧ್ಯಕ್ಷ ಹನುಮಂತಪ್ಪ ಕನಕಗಿರಿ ಹೇಳಿದರು.

ತಾಲೂಕಿನ ತರಲಕಟ್ಟಿ ಗ್ರಾಮದ ಶ್ರೀ ಶರಣಬಸವೇಶ್ವರ ದೇವಸ್ಥಾನದ ಅವರಣದಲ್ಲಿ ವಿಸ್ತಾರ ಸಂಸ್ಥೆಯಿಂದ ಇತ್ತೀಚಿಗೆ ಹಮ್ಮಿಕೊಂಡಿದ್ದ ಯುವಜನರಿಗೆ ಸಂವಿಧಾನ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಂವಿಧಾನವನ್ನು ಸರಿಯಾಗಿ ಅಧ್ಯಯನ ಮಾಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬದುಕುವುದು ಹೇಗೆ ಎಂದು ತಿಳಿಸುತ್ತದೆ. ಅಲ್ಲದೆ, ಸಮಾನತೆ ಮತ್ತು ಸೌಹಾರ್ದದಿಂದ ಜೀವಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಿದರು.

ವಿಸ್ತಾರ ಸಂಸ್ಥೆ ಸಂಯೋಜಕಿ ಆರ್.ಮಾಲಾ ಮಾತನಾಡಿ, ಹೆಣ್ಣು ಮಕ್ಕಳು ಹಾಗೂ ಪಾಲಕರು ಮುಟ್ಟಿನ ಬಗ್ಗೆ ತಪ್ಪು ತಿಳುವಳಿಕೆ ಹಾಗೂ ಮೂಢನಂಬಿಕೆ ಹೊಂದಿದ್ದಾರೆ. ಇದು ದೇಹದಲ್ಲಿ ನಡೆಯುವ ಸಹಜ ಕ್ರಿಯೆಯಾಗಿದ್ದು, ಮುಟ್ಟಿನ ಸಮಯದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ ಎಂದರು. ಪ್ರಮುಖ ಮುದಿಯಪ್ಪ ಮೇಟಿ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಶಿಕ್ಷಣ ಪಡೆದು ದೇಶ ಪ್ರೇಮ ಬೆಳೆಸಿಕೊಳ್ಳಿ ಎಂದು ಹೇಳಿದರು.

ಗ್ರಾಪಂ ಸದಸ್ಯ ಬಸಪ್ಪ ಕೊಳೂರು, ಪ್ರಮುಖರಾದ ಪ್ರಭುಗೌಡ ಪೊಲೀಸ್ ಪಾಟೀಲ್, ಶ್ರೀಕಾಂತಗೌಡ ಮಾಲಿಪಾಟೀಲ್, ಕರಿಯಪ್ಪ ಶಿಲ್ಪಿ, ತೋಟಪ್ಪ ಬೇವೂರು, ಬಸಯ್ಯ ಹಿರೇಮಠ, ಗವಿಸಿದ್ದಪ್ಪ ಹಳ್ಳಿ, ಶಾಂತಾ ತಳವಾರ, ಮೀನಾಕ್ಷಿ ಬೇವೂರು, ಧರ್ಮರಾಜ ಗೋನಾಳ, ಇಮಾಮಸಾಬ್ ಗುಳೇದಗುಡ್ಡ, ಮಂಜುಳಾ ಕುಡಗುಂಟಿ, ಸರಸ್ವತಿ ಹಳ್ಳಿ, ಜಯಶ್ರೀ ನಿಲೋಗಲ್, ಹನಮಕ್ಕ ರಾಠೋಡ ಇತರರಿದ್ದರು.