ಅರಸೀಕೆರೆ ಗ್ರಾಮಾಂತರ ತಾಲೂಕಿನ ಕಸಬಾ ಹೋಬಳಿಯ ಜಾಜೂರು ಸಮೀಪದಲ್ಲಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು ಗೀತಾ, ಹೇಮಂತ್ ಕುಮಾರ್, ನಟರಾಜ್, .್ ಹರೀಶ್,ರಾಜೇಶ್ ಖನ್ನಾ, ಮಂಜುನಾಥ್, ಕುಮಾರ್, ಇತರರು ಹಾಜರಿದ್ದರು.  
ಜಿಲ್ಲೆ

ಸಂಘರ್ಷಕ್ಕೆ ಇಳಿಯದೆ ಹೊಂದಾಣಿಕೆಯಿಂದ ಬದುಕಿ

ರವಿಕುಮಾರ್ ಪಿ. ಕೆ

ಅರಸೀಕೆರೆ ಗ್ರಾಮಾಂತರ: ತಾಲೂಕಿನ ಕಸಬಾ ಹೋಬಳಿಯ ಕಾಜೂರು ಹೊರವಲಯದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಹಾಸನ ಜಿಲ್ಲಾ ವಿಜ್ಞಾನ ಕೇಂದ್ರ ಅರಸೀಕೆರೆ ಇವರ ಸಹಯೋಗದೊಂದಿಗೆ ಗುರುವಾರ ಗಿಡಗಳನ್ನು ನೆಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ. ಎ.ಗೀತಾ ಗಿಡ ನೆಡುವ ಮೂಲಕ ಪರಿಸರ ದಿನದ ಆಚರಣೆಗೆ ಚಾಲನೆ ನೀಡಿ ಮಾತನಾಡಿದರು. ಮಾನವ ಸ್ವಾರ್ಥದಿಂದ ಪರಿಸರದೊಂದಿಗೆ ಸಂಘರ್ಷಕ್ಕೆ ಇಳಿಯದೆ ಹೊಂದಾಣಿಕೆಯಿಂದ ಬದುಕಬೇಕು. ಪ್ಲಾಸ್ಟಿಕ್ ಮುಕ್ತ ಪರಿಸರವನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಹೊಣೆಯಾಗಿದೆ. ವಿದ್ಯಾರ್ಥಿಗಳಲ್ಲಿ ಕೈಗಾರಿಕೋದ್ಯಮಿಗಳಲ್ಲಿ ಹಾಗೂ ಪ್ರತಿಯೊಬ್ಬ ನಾಗರಿಕರಲ್ಲಿ ಪರಿಸರ ಸಂರಕ್ಷಣೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ಪರಿಸರದಿನದ ಆಚರಣೆ ಪೂರಕವಾಗಿದೆ ಎಂದು ಹೇಳಿದರು.

ಕರವೇ ಜಿಲ್ಲಾ ಉಪಾಧ್ಯಕ್ಷ ಹೇಮಂತ್ ಕುಮಾರ್ ಮಾತನಾಡಿ, ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ಉಳಿಸುವಂತಹ ನಿಟ್ಟಿನಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕು ಅನ್ಯಗ್ರಹಗಳ ಮೇಲೆ ಕಾಲಿಟ್ಟಿರುವ ಮನುಷ್ಯ ಭೂಮಿಯ ಮೇಲಿರುವ ನೀರು ಗಾಳಿಯನ್ನು ಸ್ವಚ್ಛವಾಗಿರಿಸಿಕೊಳ್ಳಲು ಆಗದೆ ವಿಫಲನಾಗಿದ್ದಾನೆ. ಇದು ದುರಂತವೇ ಸರಿ. ಪ್ರಕೃತಿಗೆ ವಿರುದ್ಧವಾದ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಎಂದು ಹೇಳಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಕೆ. ಸಿ. ನಟರಾಜ್, ನಿವೃತ್ತ ಪ್ರಾಧ್ಯಾಪಕರು ಹಾಗೂ ಸಂಶೋಧಕ ಹನುಮಾ ನಾಯಕ್, ಹಾಸನ ಜಿಲ್ಲಾ ವಿಜ್ಞಾನ ಕೇಂದ್ರದ ಸದಸ್ಯರಾದ ಯುವರಾಜ್ , ಪರಿಸರವಾದಿ ಎಲ್‌ಐಸಿ ಲಿಂಗರಾಜ್, ಸಮಾಜಸೇವಕ ಕುಮಾರಣ್ಣ, ಕಾಲೇಜಿನ ಎನ್‌ಎಸ್‌ಎಸ್ ಅಧಿಕಾರಿಗಳಾದ ಡಾ. ರಾಜೇಶ್ ಖನ್ನಾ, ಡಾ. ಹರೀಶ್ ಕುಮಾರ್ ರಾಘವೇಂದ್ರಭಜಂತ್ರಿ, ಮೋಹನ್ ರಾಜ್. ಹಳೇ ವಿದ್ಯಾರ್ಥಿಗಳ ಸಂಘದ ಉಪೇಂದ್ರ ಕಲಾವಿದರಾದ ಮಂಜುನಾಥ್, ಕೊಬ್ಬರಿ ಹರೀಶ್, ಕುಮಾರ್, ಎಲ್ ಸಂತೋಷ್, ಉಮಾಶಂಕರ ಸೇರಿದಂತೆ ಕಾಲೇಜಿನ ಸಿಬ್ಬಂದಿ ಹಾಜರಿದ್ದರು.