ಕಾರ್ಕಳ: ಮಹಿಳೆಯರು ಸ್ವಸಹಾಯ ಸಂಘಗಳ ಮೂಲಕ ಆತ್ಮವಿಶ್ವಾಸಿಗಳಾಗಿ ಸ್ವಾವಲಂಬಿ ಬದುಕು ಕಟ್ಟಿಕೊಂಡು ಪುರುಷರಷ್ಟೇ ಸಮಾನರಾಗಿ ಸಮಾಜದಲ್ಲಿ ಬದುಕು ನಡೆಸುತ್ತಿದ್ದಾರೆ. ಪ್ರತಿಭೆಗೂ ಸ್ವಸಹಾಯ ಸಂಘದ ವೇದಿಕೆ ಪೂರಕ ಎಂದು ವಕೀಲೆ ಸರಿತಾ ರವೀಂದ್ರ ಶೆಟ್ಟಿ ಹೇಳಿದರು.
ನಂದಳಿಕೆ ಬೆಳಕು ಸಂಜೀವಿನಿ ಒಕ್ಕೂಟ ವತಿಯಿಂದ ನಂದಳಿಕೆ ಬೋರ್ಡ್ ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.
ನಂದಳಿಕೆ ಪಿಡಿಒ ಮಮತಾ ವೈ.ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಬೆಳಕು ಸಂಜೀವಿನಿ ಒಕ್ಕೂಟ ಅಧ್ಯಕ್ಷೆ ಜಾಯ್ಸ ಟೆಲ್ಲಿಸ್ ಅಧ್ಯಕ್ಷತೆ ವಹಿಸಿದ್ದರು.
ಕೃಷಿ ಸಾಧಕರಾದ ಅಫೋಲಿಯನ್ ನೋರೋನ್ಹ ಹಾಗೂ ಹಿರಿಯ ಮಹಿಳೆ ಕರ್ಗಿ ಪೂಜಾರ್ತಿ ಅವರನ್ನು ಸನ್ಮಾನಿಸಲಾಯಿತು. ಪಂಚಾಯಿತಿ ಕಾರ್ಯದರ್ಶಿ ಕಸ್ತೂರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ವೀಣಾ, ಬೆಳಕು ಸಂಜೀವಿನಿ ಒಕ್ಕೂಟ ಕಾರ್ಯದರ್ಶಿ ಸುಶ್ಮಿತಾ, ಉಪಾಧ್ಯಕ್ಷೆ ಸುನಿತಾ ನೋರೋನ್ಹ, ಖಜಾಂಚಿ ಶಾಲಿನಿ ಉಪಸ್ಥಿತರಿದ್ದರು. ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು. ಸುಷ್ಮಾ ವಂದಿಸಿದರು. ಸಂಘದ ಮಹಿಳೆಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆಸಲಾಯಿತು.