ಜಿಲ್ಲೆ

ಸೇವಾ ಮನೋಭಾವದಿಂದ ಬದುಕು ಸಾರ್ಥಕ

ದೊಡವಾಡ: ಸದ್ವಿಚಾರ, ಸದಾಚಾರ ಹಾಗೂ ಸಚ್ಚಿಂತನೆ ಹೊಂದಿ ಸೇವಾ ಮನೋಭಾವದಿಂದ ಮುನ್ನಡೆದಾಗ ಬದುಕು ಸಾರ್ಥಕತೆಯತ್ತ ಸಾಗುತ್ತದೆ ಎಂದು ಸ್ಥಳಿಯ ಹಿರೇಮಠದ ಜಡಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗ್ರಾಮದ ಶ್ರೀ ರಾಮಲಿಂಗೇಶ್ವರ ಸಭಾಭವನದಲ್ಲಿ ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ, ಬಿಸಿ ಟ್ರಸ್ಟ್​ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಗಳ ಒಕ್ಕೂಟ ದೊಡವಾಡ ವಲಯಗಳ ಸಂಯುಕ್ತಾಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಧಗ್ರಾಯೋ ಜಿಲ್ಲಾ ನಿರ್ದೇಶಕ ಸತೀಶ ನಾಯ್ಕ ಮಾತನಾಡಿ, ಆಡು ಮುಟ್ಟದ ಸೊಪ್ಪಿಲ್ಲ. ಶ್ರೀ ೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡದಿರುವ ಸಮಾಜ ಸೇವಾ ಕಾರ್ಯುಗಳಿಲ್ಲ. ಸ್ವಸಹಾಯ ಸಂಗಳ ಮೂಲಕ ಲಾಂತರ ಜನರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡಲಾಗಿದೆ. ಕೆರೆ ಅಭಿವದ್ಧಿ ಯೋಜನೆಯಡಿ ರಾಜ್ಯಾದ್ಯಂತ ಸಾವಿರಾರು ಕೆರೆಗಳನ್ನು ದತ್ತು ಪಡೆದು ಅಭಿವದ್ಧಿಪಡಿಸಲಾಗಿದೆ. ಬಡತನ ಮತ್ತು ದುಶ್ಚಟ ಮುಕ್ತ ಸಮಾಜ ನಿರ್ಮಾಣವೇ ಸಂದ ಮುಖ್ಯಧ್ಯೇಯವಾಗಿದೆ ಎಂದರು.

ಶ್ರೀ ಸಂಗಮೇಶ್ವರ ಪಿಕೆಪಿಎಸ್​ ಅಧ್ಯ ನಿಂಗಪ್ಪ ಚೌಡಣ್ಣವರ ಮಾತನಾಡಿದರು. ರಾಮಲಿಂಗೇಶ್ವರ ದೇವಸ್ಥಾನ ಕಮೀಟಿ ಅಧ್ಯ ಮಲ್ಲಪ್ಪ ಅಂದಾನಶೆಟ್ಟಿ, ಗ್ರಾಪಂ ಅಧ್ಯೆ ಸಂಗೀತಾ ಚಂದರಗಿ, ಉಪಾಧ್ಯೆ ಶೋಭಾ ಮಡಿವಾಳರ, ಮಲ್ಲಪ್ಪ ಯರಿಕಿತ್ತೂರ, ಬಸವಂತಪ್ಪ ಜಮನೂರ, ಬಸವರಾಜ ಬುಡರಕಟ್ಟಿ, ವಿಜಯಲಕ್ಷಿ$್ಮ ಸಂಗೊಳ್ಳಿ, ಸೋಮನಿಂಗಪ್ಪ ಚೌಡಣ್ಣವರ, ಕೃಷಿ ಮೇಲ್ವಿಚಾರಕ ರವಿ ಆರ್​.ಜಿ., ತಾಲೂಕು ಯೋಜನಾಧಿಕಾರಿ ವಿಜಯಕುಮಾರ, ಆರತಿ ಯಲಿಗಾರ, ಪರಶುರಾಮ ಬನಸೋಡೆ, ಬಾಹುಬಲಿ ಇತರರಿದ್ದರು.