ದೇವದುರ್ಗ: ಕನಕದಾಸರು ಗ್ರಂಥಗಳನ್ನು ರಚನೆ ಮಾಡುವುದಲ್ಲದೆ ಸಮಾಜ ಭಕ್ತಿ ಮಾರ್ಗದಲ್ಲಿ ಹೇಗೆ ಮುನ್ನಡೆಯಬೇಕು ಎನ್ನುವುದನ್ನು ತೋರಿಸಿ ಕೊಟ್ಟಿದ್ದಾರೆ ಎಂದು ರಾಜ್ಯ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷ ಎಸ್.ಕೆ.ನಾಗರಾಜ ಖಾನಾಪುರ ಹೇಳಿದರು.
ಇದನ್ನೂ ಓದಿ: ಕನಕದಾಸ ಆದರ್ಶ ಅಳವಡಿಸಿಕೊಳ್ಳಿ
ಪಟ್ಟಣದ ಮಿನಿವಿಧಾನಸೌಧದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಪ್ರತಿಯೊಬ್ಬರು ದಾಸರ ತತ್ವಾದರ್ಶಗನ್ನು ಅನುಸರಿಸಿದರೆ ಸಮೃದ್ಧ ಸಮಾಜ ಕಟ್ಟಬಹುದು.
ಸಮಾಜದ ಪ್ರಗತಿಗಾಗಿ ಕೀರ್ತನೆಗಳನ್ನು ರಚಿಸುವ ಜತೆಗೆ ಹಲವು ಗ್ರಂಥಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ. ಭಕ್ತಿ ಮಾರ್ಗದ ಮೂಲಕವೇ ದೇವರನ್ನು ಗೆಲ್ಲಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಅವರ ಜೀವನ ಎಲ್ಲರಿಗೂ ಮಾರ್ಗದರ್ಶನ ಎಂದರು.
ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಉಪತಹಸೀಲ್ದಾರ್ ವೆಂಕಟೇಶ, ಗೋವಿಂದ ನಾಯಕ, ತಾಪಂ ಇಒ ಬಸವರಾಜ ಹಟ್ಟಿ, ಟಿಎಚ್‌ಒ ಡಾ.ಬನದೇಶ್ವರ, ಪುರಸಭೆ ಮುಖ್ಯಾಧಿಕಾರಿ ಕೆ.ಹಂಪಯ್ಯ, ವ್ಯವಸ್ಥಾಪಕ ಗಂಗಾಧರ್, ಕಂದಾಯ ನಿರೀಕ್ಷಕ ಭೀಮನಗೌಡ ಪಾಟೀಲ್, ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ನರಸಣ್ಣ ನಿಲವಂಜಿ, ಉಪಾಧ್ಯಕ್ಷ ಬಸವರಾಜ ಮಂಡಲಗುಡ್ಡ, ಅಯ್ಯಣ್ಣ ದಿವಳಗುಡ್ಡ ಇತರರಿದ್ದರು.