ಜಿಲ್ಲೆ

ಸಂತೋಷವಾಗಿರುವ ಕಲೆ ಕಲಿಸುವ ಸಾಹಿತ್ಯ; ನರಹಳ್ಳಿ ಬಾಲಸುಬ್ರಹ್ಮಣ್ಯ ಅಭಿಮತ

ಬೆಂಗಳೂರು: ಅನೇಕ ವಿಷಯಗಳನ್ನು ಬದುಕು ಕಲಿಸಿದರೆ, ಸಾಹಿತ್ಯವು ಆ ಬದುಕಿನಲ್ಲಿ ಸಂತೋಷವಾಗಿರುವ ಕಲೆಯನ್ನು ಕಲಿಸುತ್ತದೆ ಎಂದು ಹಿರಿಯ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಹೇಳಿದ್ದಾರೆ.

ಯಲಹಂಕದ ಶೇಷಾದ್ರಿಪುರಂ ಪ್ರಥಮ ದರ್ಜೆ ಕಾಲೇಜಿನ ಐಕ್ಯುಎಸಿ ಟಕ, ಕನ್ನಡ ಸಂ ಹಾಗೂ ಗ್ರಂಥಾಲಯ ವಿಭಾಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಕನ್ನಡದ ವಿವೇಕ ಪರಂಪರೆ' ಕುರಿತು ಉಪನ್ಯಾಸ ನೀಡಿದರು. ಕವಿರಾಜಮಾರ್ಗಕಾರ ಶ್ರೀವಿಜಯ 'ಕಸವರವೆಂಬುದು ನೆರೆಸೈರಿಸಲಾರ್ಪಡೆ ಪರವಿಚಾರಮಂ ಪರಧರ್ಮಮ್​' ಎನ್ನುವಲ್ಲಿ ಸಹಿಷ್ಣತೆಯೇ ದೊಡ್ಡ ಸಂಪತ್ತೆಂದು ಹೇಳುತ್ತಾನೆ. ಸಭ್ಯ ಸಮಾಜದಲ್ಲಿ ಹೇಗಿರಬೇಕೆಂಬುದನ್ನು 'ಕಳಬೇಡ.. ಕೊಲಬೇಡ.. ಹುಸಿಯ ನುಡಿಯಲು ಬೇಡ..' ಎಂದು ಬಸವಣ್ಣ ತಿಳಿಸಿದ್ದಾರೆ. ಅಕ್ಕಮಹಾದೇವಿ ಕೂಡ ಈ ನಿಟ್ಟಿನಲ್ಲಿ ಮಹತ್ತರ ಸಂದೇಶಗಳನ್ನು ಸಾರಿದ್ದಾರೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ.ಎಸ್​.ಎನ್​. ವೆಂಕಟೇಶ್​ ಮಾತನಾಡಿ, ವಿದ್ಯಾರ್ಥಿಗಳಲ್ಲಿ ತಾಳ್ಮೆ ಕಡಿಮೆಯಾಗುತ್ತಿದ್ದು, ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ತಾಳ್ಮೆಯಿಂದ ಕಷ್ಟದ ಸಂದರ್ಭ ನಿಭಾಯಿಸಿದರೆ, ಆತ ಭವಿಷ್ಯದಲ್ಲಿ ಸಾಧಕನಾಗುವ ಅವಕಾಶವಿದೆ ಎಂದು ಹೇಳಿದರು.

ಪತ್ರಕರ್ತ ನ. ರವಿಕುಮಾರ, ಐಕ್ಯುಎಸಿ ಸಂಚಾಲಕ ಡಾ.ಎಂ.ಎಲ್​. ಅಶೋಕ್​, ಗ್ರಂಥಾಲಯ ವಿಭಾಗದ ಡಾ.ಪವನ್​ ಕುಮಾರ್​, ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಡಿ.ಸಿ. ಗೀತಾ, ಕನ್ನಡ ಸಂದ ವಿದ್ಯಾರ್ಥಿ ವಿಭಾಗದ ಅಧ್ಯೆ ಧಾತ್ರಿ ಇತರರಿದ್ದರು.