ಸಿಂಧನೂರಿನಲ್ಲಿ ಎಚ್.ಎಂ. ಶ್ರೀಶೈಲ ಅವರ ಸಂಪಾದನಾ ಕೃತಿ ‘ಧರೆಯ ಸಗ್ಗ ಕರುನಾಡ’ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರಮುಕರಾದ ಅಮರೇಗೌಡ ಪಾಟೀಲ್ ಜಾಲಿಹಾಳ, ಪಂಪಯ್ಯಸ್ವಾಮಿ ಸಾಲಿಮಠ, ಡಾ.ಹುಸೇನಪ್ಪ ಅಮರಾಪುರ ಇತರರಿದ್ದರು. 
ಜಿಲ್ಲೆ

ಸಾಹಿತ್ಯ ರಚನೆ ನಿಂತ ನೀರಲ್ಲ

ರುದ್ರಪ್ಪ ವಾಲಿ

ಸಿಂಧನೂರು: ಸಮಾಜಕ್ಕೆ ಉತ್ತಮ ಸಂದೇಶ ನೀಡುವ, ಸರಿಯಾದ ಮಾರ್ಗ ತೋರುವ ಕೃತಿಗಳು ಹೆಚ್ಚಾಗಿ ರಚನೆಯಾಗಬೇಕು ಎಂದು ನಿವೃತ್ತ ಶಿಕ್ಷಕ ಹಾಗೂ ಹಾಸ್ಯ ಸಾಹಿತಿ ವೆಂಕನಗೌಡ ವಟಗಲ್ ಹೇಳಿದರು

ನಗರದಲ್ಲಿ ಕಸಾಪ ತಾಲೂಕು ಘಟಕ, ಕರುನಾಡ ಕವಿ ಕಾವ್ಯ, ಪ್ರತಿಭಾ ಸಿಂಚನ ವೇದಿಕೆ, ಜ್ಞಾನ ಜ್ಯೋತಿ ಎಜುಕೇಷನ್ ಟ್ರಸ್ಟ್, ಶಾರದಾ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಎಚ್.ಎಂ.ಶ್ರೀಶೈಲ ಅವರ ಸಂಪಾದನಾ ಕೃತಿ ‘ಧರೆಯ ಸಗ್ಗ ಕರುನಾಡ’ ಬಿಡುಗಡೆ, ನಾಡು ಚೆಂದ ಹಾಡಿನ ಧ್ವನಿಸುರುಳಿ ಬಿಡುಗಡೆ, ಕವಿಗೋಷ್ಠಿ ಹಾಗೂ ಬೆಳ್ಳಿ ನಾಣ್ಯಗಳ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾಹಿತ್ಯ ರಚನೆ ನಿಂತ ನೀರಲ್ಲ. ಅದು ಹರಿಯುವ ನದಿಯಾಗಿದೆ. ಅತ್ಯುತ್ತಮ ಕೃತಿಗಳು ಹೊರ ಬರಬೇಕು. ಯುವ ಸಾಹಿತಿಗಳು ಜನಸಾಮಾನ್ಯರ ಕುರಿತ ಕಾವ್ಯ, ಕೃತಿಗಳಿಗೆ ಆದ್ಯತೆ ನೀಡಬೇಕು. ಅವರ ಜೀವನದ ಹಾದಿಗಳನ್ನು ಬಿಂಬಿಸಬೇಕು ಎಂದರು.

ಗಜಲ್ ಕವಿ ಡಾ.ಷರೀಫ್ ಹಸಮಕಲ್, ಪ್ರತಿಭಾ ಸಿಂಚನ ವೇದಿಕೆ ನಿರ್ದೇಶಕ ಪಿ.ವೆಂಕಟೇಶ ಬಾಗಲವಾಡ, ಸಂಘಟನೆ ಕಾರ್ಯದರ್ಶಿ ಶಿವರಾಜ ದಿನ್ನಿ ಪೋತ್ನಾಳ್, ಮಹಾದೇವ, ಶಾರದಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ವಿಜಯಕುಮಾರ್ ವಕೀಲ, ಪ್ರಾಚಾರ್ಯ ಡಾ.ಬಸವರಾಜ ಬಾದರ್ಲಿ, ಶರಣಪ್ಪ ಹೊಸಳ್ಳಿ, ವಿಜಯಲಕ್ಷ್ಮೀ ಗುರಿಕಾರ, ಚಂದ್ರಮತಿ ಆಲ್ದಾಳ, ಸುರೇಶ ಹೀರಾ, ವಿಜಯಲಕ್ಷ್ಮೀ ಇದ್ದರು. ಉಪನ್ಯಾಸಕಿ ವೀಣಾ ನಿರೂಪಿಸಿದರು. ಶಿಕ್ಷಕ ವಿಶ್ವನಾಥ ವಂದಿಸಿದರು.