ಜಿಲ್ಲೆ

ಕಥಾ ಸಂಕಲನ ಅವಲೋಕನ

Dharwada - Basavaraj Idli

ಹುಬ್ಬಳ್ಳಿ: ಇಲ್ಲಿಯ ಕಾಳಿದಾಸನಗರದಲ್ಲಿರುವ ನಾಗಸುಧೆ ಜಗಲಿಯಲ್ಲಿ ಡಾ. ಬಸು ಬೇವಿನಗಿಡದ ಅಭಿನಂದನೆ ಮತ್ತು ಕಾವ್ಯಾ ಕಡಮೆ ಕಥಾಸಂಕಲನ ತೊಟ್ಟು ಕ್ರಾಂತಿ ಕುರಿತು ಅವಲೋಕನ ಕಾರ್ಯಕ್ರಮವನ್ನು ಆಗಸ್ಟ್ 4ರಂದು ಬೆಳಗ್ಗೆ 10.15ಕ್ಕೆ ಹಮ್ಮಿಕೊಳ್ಳಲಾಗಿದೆ.

ಅಕ್ಷರ ಸಾಹಿತ್ಯ ವೇದಿಕೆ ಮತ್ತು ನಾಗಸುಧೆ ಜಗಲಿ ಸಂಯುಕ್ತಾಶ್ರಯದಲ್ಲಿ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕ್ಷರ ಬಳಗದ ಅಧ್ಯಕ್ಷ ಎಂ.ಬಿ. ಅಡ್ನೂರ ವಹಿಸುವರು.

ಚನ್ನಪ್ಪ ಅಂಗಡಿ ಮತ್ತು ಸಿ.ಎಂ. ಮುನಿಸ್ವಾಮಿ ಅವರು ಬಸು ಬೇವಿನಗಿಡದ ಅವರ ಸಾಹಿತ್ಯದ ಕುರಿತು ಮಾತನಾಡಲಿದ್ದು, ಕಥಾ ಸಂವಾದದಲ್ಲಿ ಡಾ. ಭಾರತಿ ಹಿರೇಮಠ, ಡಾ. ವೈ.ಎಂ. ಭಜಂತ್ರಿ, ನಿರ್ಮಲಾ ಶೆಟ್ಟರ್, ಡಾ. ರಂಗನಾಥ ಕಂಟನಕುಂಟೆ, ತೇಜಾವತಿ ಎಚ್.ಡಿ., ಮಲ್ಲಿಕಾರ್ಜುನ ಸಿದ್ದಣ್ಣನವರ, ಗಾಯತ್ರಿ ರವಿ, ಮಹಾಂತಪ್ಪ ನಂದೂರು ಪಾಲ್ಗೊಳ್ಳುವರು ಎಂದು ಸಾಹಿತಿ ಸುನಂದಾ ಕಡಮೆ ತಿಳಿಸಿದ್ದಾರೆ.