ಕನ್ನಡ ವಿವಿಯ ಭುವನ ವಿಜಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಮಾತನಾಡಿದರು. ಕುಲಸಚಿವ ಡಾ.ವಿಜಯ ಪೂಣಚ್ಚ ತಂಬಂಡ ಇದ್ದರು. 
ಜಿಲ್ಲೆ

ಸಾಹಿತಿ ಕಮಲಾ ಹಂಪನಾ ಕೊಡುಗೆ ಅಪಾರ

ನರೇಶ್ ಕುಮಾರ್

ಹೊಸಪೇಟೆ: ಹಿರಿಯ ಸಾಹಿತಿಗಳಾದ ಪ್ರೊ.ಹಂಪನಾ, ಕಮಲಾ ಹಂಪನಾ ಅವರು ಸಾಹಿತ್ಯ ವಲಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಕನ್ನಡ ವಿವಿ ಕುಲಪತಿ ಡಾ.ಡಿ.ವಿ.ಪರಮಶಿವಮೂರ್ತಿ ಹೇಳಿದರು.

ಕಮಲಾ ಹಂಪನಾ ನಿಧನ ಹಿನ್ನೆಲೆಯಲ್ಲಿ ಕನ್ನಡ ವಿವಿಯ ಭುವನ ವಿಜಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಸಂತಾಪ ಸೂಚಕ ಸಭೆಯಲ್ಲಿ ಮಾತನಾಡಿದರು.

ಕಮಲಾ ಹಂಪನಾ ಅವರು ಹಲವಾರು ಪುಸ್ತಕ, ಕವನ ಸಂಕಲನ, ಕಥೆ, ಕವಿತೆ ಮತ್ತು ಕಾದಂಬರಿ ಸಂಶೋಧನಾ ಗ್ರಂಥಗಳನ್ನು ಸಂಪಾದಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಪ್ರಶಸ್ತಿಗಳು ಅರಸಿ ಬಂದಿವೆ. ಕನ್ನಡ ವಿವಿ ಜತೆಗೆ ನಿಕಟ ಸಂಪರ್ಕ ಹೊಂದಿದ್ದರು. 1998ರಲ್ಲಿ ನಾಡೋಜ ಪುರಸ್ಕಾರ ನೀಡಿ ಗೌರವಿಸಿತ್ತು. ಜೈನ ಸಾಹಿತ್ಯದ ಬಗ್ಗೆ ತುಡಿತ ಹೊಂದಿದ್ದ ಲೇಖಕಿಯರಲ್ಲಿ ಒಬ್ಬರನ್ನು ಕಳೆದುಕೊಂಡಂತಾಗಿದೆ ಎಂದರು.