ಮೈಸೂರು: ಸವಾಜ ಮುಖಿಯಾದ ಸಾಹಿತ್ಯ ಮಾತ್ರ ಬಹುಕಾಲ ಜನಮಾನಸದಲ್ಲಿ ಉಳಿದುಕೊಳ್ಳಲು ಸಾಧ್ಯ ಎಂದು ಹಾಯ್ಕು ಮತ್ತು ಗಜಲ್‌ಕಾರ ಡಾ.ಸಿದ್ದರಾಮ ಹೊನ್ಕಲ್ ಅಭಿಪ್ರಾಯಪಟ್ಟರು.
ಮೈಸೂರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ, ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಸಹಯೋಗದಲ್ಲಿ ರೋಟರಿ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಒಂದು ಕಾಲದ ಸಾಹಿತಿಗಳು ಮುಂದಿನ ತಲೆಮಾರಿಗೆ ಇತಿಹಾಸವಾಗಿಯೂ ಉಳಿದುಕೊಳ್ಳುತ್ತಾರೆ. ಇದಕ್ಕೆ ಕುಮಾರವ್ಯಾಸ, ಪಂಪ, ಬಸವಣ್ಣ ಮತ್ತು ಬೀರಬಲ್ ನಿದರ್ಶನ. ಪಂಪನ ಕಾರಣದಿಂದ ಹರಿಕೇಸರಿ, ಬಸವಣ್ಣನ ಕಾರಣದಿಂದ ಬಿಜ್ಜಳ ಮತ್ತು ಬೀರಬಲ್‌ನ ಕಾರಣದಿಂದ ಅಕ್ಬರ್ ಜನಮಾನಸದಲ್ಲಿ ಇನ್ನೂ ಜೀವಂತವಾಗಿದ್ದಾರೆ ಎಂದರು.
ಸಾಹಿತಿಗಳು ತಮ್ಮ ಕಾಲವಾನದ ಸಾಕ್ಷಿ ಪ್ರಜ್ಞೆ. ಲೇಖಕರ ಸಾಹಿತ್ಯ ಶತಮಾನಗಳ ಕಾಲ ಉಳಿಯುತ್ತದೆ. ಈ ಕಾರಣಕ್ಕಾಗಿ ಕವಿ ಮತ್ತು ಬರಹಗಾರ ಸಾವಾಜಿಕ ಪ್ರಜ್ಞೆ, ಜನಮುಖಿ ನಿಲುವುಗಳನ್ನು ತಮ್ಮ ಬರವಣಿಗೆಯಲ್ಲಿ ಪ್ರತಿಬಿಂಬಿಸಬೇಕು ಎಂದರು.
ಪ್ರೀತಿ, ಪ್ರೇವಾನುಭೂತಿಯಿಂದ ತುಂಬಿದ ನವಿರಾದ ಭಾವ ಇರುವುದು ಗಜಲ್ ಸಾಹಿತ್ಯದಲ್ಲಿ. ಜತೆಗೆ. ವಿರಹವೇದನೆಯ ನೋವುಗಳನ್ನು ವಿಶಿಷ್ಟವಾಗಿ ಪ್ರಸ್ತುತ ಪಡಿಸಬಹುದು. ಹಸಿವು, ಬಡತನ, ಅವವಾನಗಳಿಗೂ ಸಂವೇದನಾಶೀಲವಾಗಿ ಸ್ಪಂದಿಸಬಹುದು ಎಂದರು.
ಎಂ.ಬಿ.ಸಂತೋಷ್ ಅವರ ‘ನೂಪುರ’ ಹಾಯ್ಕುಗಳ ಸಂಕಲನ, ಬಿ.ಶೋಭಾ ಅವರ ‘ಭಾವರಂಗದ ಪಯಣ’ ಕವನ ಸಂಕಲನ ಮತ್ತು ಸಿ.ವಾಣಿ ರಾಘವೇಂದ್ರ ಅವರ ‘ಡಾ.ಶ್ವೇತಾ’ ಅನುವಾದಿತ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು.
ಹಾಯ್ಕು ಮತ್ತು ಗಜಲ್‌ಕಾರ ಡಾ.ಸಿದ್ದರಾಮ ಹೊನ್ಕಲ್ ಅವರಿಗೆ ಕರ್ನಾಟಕ ಸಾಹಿತ್ಯ ರತ್ನ ಪ್ರಶಸ್ತಿ, ಸಿ.ವಾಣಿ ರಾಘವೇಂದ್ರ ಅವರಿಗೆ ಬಹುಭಾಷಾ ಸಾಹಿತ್ಯ ಚೇತನ ಪ್ರಶಸ್ತಿ, ಡಾ.ಕೆ.ಪ್ರೇಮಕುಮಾರ್ ಅವರಿಗೆ ಶಿಕ್ಷಣ ರತ್ನ ಪ್ರಶಸ್ತಿ, ಸುಜಾತಾ ರವೀಶ್ ಅವರಿಗೆ ಸಾಹಿತ್ಯ ಶ್ರೀ ಪ್ರಶಸ್ತಿ, ಆರ್.ಚಂದ್ರಶೇಖರ್, ಚಿನ್ಮಯ್ ಎಂ.ನಾಯಕ್, ಪಿ.ಅನ್ನಪೂರ್ಣ ಅವರಿಗೆ ಬಾಲಶ್ರೀ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು
ಕವಯತ್ರಿ ಡಾ.ಲತಾ ರಾಜಶೇಖರ್, ಕೃತಿಕಾರರಾದ ಎಂ.ಬಿ. ಸಂತೋಷ್, ಬಿ. ಶೋಭಾ, ಸಿ.ವಾಣಿ ರಾಘವೇಂದ್ರ, ಹೇಮಗಂಗಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷೆ ಎ.ಹೇಮಗಂಗಾ, ಸಂಘಟನಾ ಕಾರ್ಯದರ್ಶಿ ಡಾ.ಕೆ. ಪ್ರೇಮಕುಮಾರ್ ಇನ್ನಿತರರಿದ್ದರು.