ಹೂಲಗೇರಾ ಗ್ರಾಮದಲ್ಲಿ 13ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಕಚೇರಿ ಉದ್ಘಾಟನೆ ಹಾಗೂ ಕರಪತ್ರಗಳ ಬಿಡುಗಡೆ ಸಮಾರಂಭ ನಡೆಯಿತು. ಕಸಾಪ ತಾಲೂಕು ಅಧ್ಯಕ್ಷ ಲೆಂಕೆಪ್ಪ ವಾಲಿಕಾರ, ಸ್ವಾಗತ ಸಮಿತಿ ಕೋಶಾಧ್ಯಕ್ಷ ಮಹಾಂತಗೌಡ ಪಾಟೀಲ್, ಜಿಪಂ ಮಾಜಿ ಸದಸ್ಯ ಪ್ರಕಾಶ ರಾಠೋಡ ಇತರರಿದ್ದರು. 
ಜಿಲ್ಲೆ

ಸಾಹಿತ್ಯ ಸಮ್ಮೇಳನ ಯಶಸ್ಸಿಗೆ ಕೈಜೋಡಿಸಿ

ರುದ್ರಪ್ಪ ವಾಲಿ

ಹನುಮಸಾಗರ: ಕನ್ನಡ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಕಸಾಪ ತಾಲೂಕು ಅಧ್ಯಕ್ಷ ಲೆಂಕೆಪ್ಪ ವಾಲಿಕಾರ ಹೇಳಿದರು.

ಸಮೀಪದ ಹೂಲಗೇರಾ ಗ್ರಾಮದಲ್ಲಿ ಶನಿವಾರ 13ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಿಮಿತ್ತ ಕಚೇರಿ ಉದ್ಘಾಟನೆ ಹಾಗೂ ಕರಪತ್ರ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಹೂಲಗೇರಾ ಹಾಗೂ ತಾಲೂಕಿನ ಗ್ರಾಮಸ್ಥರು, ಕಸಾಪ ಪದಾಧಿಕಾರಿಗಳು ಒಗ್ಗಟ್ಟಿನಿಂದ ಶ್ರಮಿಸಿದರೆ ಸಮ್ಮೇಳನ ಯಶಸ್ವಿಯಾಗಲಿದೆ. ಸಮ್ಮೇಳನದಲ್ಲಿ ವಿವಿಧ ಮಳಿಗೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಪುಸ್ತಕ ಮಳಿಗೆ, ವಸ್ತು ಪ್ರದರ್ಶನ ಮಳಿಗೆ ಪ್ರಾರಂಭಿಸುವವರು ಕಸಾಪ ತಾಲೂಕು ಘಟಕದ ಪದಾಧಿಕಾರಿಗಳನ್ನು ಸಂಪರ್ಕಿಸಬೇಕು ಎಂದರು.

ಸ್ವಾಗತ ಸಮಿತಿ ಕೋಶಾಧ್ಯಕ್ಷ ಮಹಾಂತಗೌಡ ಪಾಟೀಲ್ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಜಿಪಂ ಮಾಜಿ ಸದಸ್ಯ ಪ್ರಕಾಶ ರಾಠೋಡ ಕರಪತ್ರ ಬಿಡುಗಡೆ ಮಾಡಿದರು. ಕೇಂದ್ರ ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ನಬೀಸಾಬ ಕುಷ್ಟಗಿ, ತಾಪಂ ಮಾಜಿ ಸದಸ್ಯ ಶೇಖರ ಹೋರಪೇಟೆ, ಪ್ರಮುಖರಾದ ಶಂಕರ ಕರಪಡಿ, ಶ್ರೀನಿವಾಸ ಜಹಗೀರದಾರ, ಗ್ಯಾನಪ್ಪ ತಳವಾರ, ಕೃಷ್ಣ ಕುಲಕರ್ಣಿ, ಬಸವರಾಜ, ಚಂದಪ್ಪ ಗುಡಿಮನಿ, ವೀರೇಶ ಜಾಲಾಪೂರ, ಸಂಗಯ್ಯ ಹೊಸಮಠ, ಶೇಖರಪ್ಪ ತುಂಬದ, ದುರಗಪ್ಪ, ಗೀತಾ ಎಚ್, ಫ್ರಭು ಮಾಲಗಿತ್ತಿ, ನಬೀಸಾಬ ಬೇವಿನಗಿಡದ, ಬಸವರಾಜ ಗಾಣಿಗೇರ, ಪ್ರಹ್ಲಾದ ಕುಲಕರ್ಣಿ, ಶಿವಶಂಕ್ರಯ್ಯ ಸೊಪ್ಪಿಮಠ, ಆದಯ್ಯ ವಿರಕ್ತಮಠದ, ಮಲಕಾಜಪ್ಪ ಗಾಣಿಗೇರ ಇತರರಿದ್ದರು.