ಫೋಟೋ: ಕಾರಟಗಿ ತಾಲೂಕಿನ ಬೂದಗುಂಪಾದಲ್ಲಿ ಸಂಪೂರ್ಣ ಸಾಕ್ಷರತಾ ಅಭಿಯಾನದ ಮೂಲ ಸಾಕ್ಷರತಾ ಪರೀಕ್ಷೆಯ ಹಿನ್ನಲೆಯಲ್ಲಿ ಶುಕ್ರವಾರ ಜಾಗೃತಿ ಜಾಥಾ ನಡೆಸಲಾಯಿತು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರೀತಿ, ಸಿಆರ್‌ಪಿಗಳಾದ ಮಂಜುನಾಥ ಚಿಕ್ಕೇನಕೊಪ್ಪ, ತಿಮ್ಮಣ್ಣ ನಾಯಕ ಇತರರಿದ್ದರು. 
ಜಿಲ್ಲೆ

ಸಾಕ್ಷರ ನಾಡನ್ನಾಗಿಸಲು ಶ್ರಮಿಸಿ

Kopala - Desk - Eraveni

ಕಾರಟಗಿ: ನಿರಂತರ ಕಲಿಕೆಗೆ ಪ್ರೇರೇಪಿಸುವುದರಿಂದ ಅನಕ್ಷರತೆ ತೊಲಗಿಸಬಹುದು ಎಂದು ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಪ್ರೀತಿ ಹೇಳಿದರು.

ತಾಲೂಕಿನ ಬೂದಗುಂಪಾ ಗ್ರಾಪಂನಿಂದ ಶುಕ್ರವಾರ ಏರ್ಪಡಿಸಿದ್ದ ಸಂಪೂರ್ಣ ಸಾಕ್ಷರತಾ ಅಭಿಯಾನದ ಸಾಕ್ಷರತಾ ಪರೀಕ್ಷೆಯ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು. ಅನಕ್ಷರತೆಯೆಂಬ ಕತ್ತಲೆ ಹೋಗಲಾಡಿಸಿ ಸಾಕ್ಷರ ನಾಡನ್ನಾಗಿಸಲು ಲೋಕ ಶಿಕ್ಷಣ ಕೇಂದ್ರದಲ್ಲಿ ಕಲಿತ ಪ್ರತಿಯೊಬ್ಬರು ಕಡ್ಡಾಯವಾಗಿ ಪರೀಕ್ಷೆ ಬರೆಯಬೇಕು ಎಂದರು.

ಪ್ರೇರಕರು ನವ ಸಾಕ್ಷರರಿಗೆ ನೀಡುವ ಕಲಿಕೆಯಿಂದ ಅವರ ತಿಳಿವಳಿಕೆ ಹೆಚ್ಚಲಾಗಲಿದೆ. ಬದುಕುವ ಜ್ಞಾನ ಅವರಲ್ಲಿ ಬೆಳೆದರೆ ಇದು ಸಾರ್ಥಕ. ಓರ್ವ ಸಾಕ್ಷರರು ಕನಿಷ್ಠ ಒಬ್ಬ ಅನಕ್ಷರಸ್ಥನಿಗೆ ಕಲಿಕೆಗೆ ಪ್ರೇರಣೆ ನೀಡಿದರೆ ರಾಜ್ಯ ಶೇ.100 ಸಾಕ್ಷರತೆಯ ಕನಸಿನ ಹಾದಿ ಸುಗಮವಾಗಲಿದೆ.

ಹೀಗಾಗಿ ಲೋಕ ಶಿಕ್ಷಣ ಕೇಂದ್ರದಲ್ಲಿ ಕಲಿತವರು ಆ.8ರಂದು ನಡೆಯುವ ಮೂಲ ಸಾಕ್ಷರತಾ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕು. ಕೇಂದ್ರದ ಪ್ರೇರಕರು ಸಹ ಪರೀಕ್ಷೆ ಕುರಿತು ಅರಿವು ಮೂಡಿಸಬೇಕು ಎಂದು ತಿಳಿಸಿದರು. ಬೂದಗುಂಪಾ, ಹಾಲಸಮುದ್ರ, ತಿಮ್ಮಾಪುರ, ಶೇಷಗಿರಿ ಕ್ಯಾಂಪ್ ಹಾಗೂ ಬೇವಿನಾಳ ಗ್ರಾಮದಲ್ಲಿ ಜಾಗೃತಿ ಜಾತಾ ನಡೆಸಲಾಯಿತು.