ಜಿಲ್ಲೆ

ಮೆಟ್ರೋ ನಿಲ್ದಾಣಗಳಿಗೆ ಸಾಹಿತಿಗಳ ಹೆಸರು: ಪರಿಶೀಲಿಸಿ ಕ್ರಮವಹಿಸಲು ಸೂಚನೆ

ಪಂಕಜ ಕೆ.ಎಂ.

ಬೆಂಗಳೂರು:  ನಗರದ ವಿವಿಧ ಮೆಟ್ರೋ ನಿಲ್ದಾಣಗಳಿಗೆ ಸಾಹಿತಿಗಳ ಹೆಸರಿಡುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್.ಮುಕುಂದರಾಜ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಅವರು ಸಾಹಿತಿಗಳ ಹೆಸರು ಸಹಿತ ಬೆಂಗಳೂರು ಮೆಟ್ರೋ ರೈಲು ನಿಗಮದ (ಬಿಎಂಆರ್‌ಸಿಎಲ್) ವ್ಯವಸ್ಥಾಪಕ ನಿರ್ದೇಶಕರಿಗೆ ಆಗಸ್ಟ್ ತಿಂಗಳಲ್ಲಿ ಮನವಿ ಮಾಡಿದ್ದರು. ಈ ಮನವಿಯನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ ಎಂ. ಶಾಂತಪ್ಪ ಅವರು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

ಮಹಾತ್ಮಗಾಂಧಿ ಅವರ ಪ್ರೇರಣಿಯಿಂದ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಹೆಸರನ್ನು ರಾಜಾಜಿನಗರ ಮೆಟ್ರೋ ನಿಲ್ದಾಣಕ್ಕೆ ಇಡುವಂತೆ. ಉಳಿದಂತೆ ಬಿ.ಎಂ.ಶ್ರೀ ( ಇಂದಿರಾನಗರ), ಶ.ರಂ. ಕೃಷ್ಣೇಗೌಡ (ಎನ್.ಜಿ.ಇ.ಎ್), ಎಚ್.ಎಲ್. ನಾಗೇಗೌಡ (ಮೈಸೂರು ರಸ್ತೆ), ಟಿ.ಆರ್. ಶಾಮಣ್ಣ ( ಬಸವನಗುಡಿ), ಎಚ್. ನರಸಿಂಹಯ್ಯ (ನ್ಯಾಷನಲ್ ಕಾಲೇಜು), ರಾಜೇಗೌಡ ಹೊಸಹಳ್ಳಿ (ವಿಜಯನಗರ/ಅತ್ತಿಗುಪ್ಪೆ), ಜಿ. ನಾರಾಯಣ (ಕೆ.ಆರ್. ಮಾರುಕಟ್ಟೆ/ಚಾಮರಾಜಪೇಟೆ), ಎಂ.ಪಿ.ಎಲ್. ಶಾಸಿ (ಮಲ್ಲೇಶ್ವರ), ಕ.ರಾ.ಕೃ (ಮಹಾಲಕ್ಷ್ಮೀ ಲೇಔಟ್), ಎಂ.ಎಚ್. ಕೃಷ್ಣಯ್ಯ (ಶ್ರೀರಾಮಪುರ), ಜಿ.ಎಸ್. ಶಿವರುದ್ರಪ್ಪ (ಬನಶಂಕರಿ), ಪಿ. ಲಂಕೇಶ್ (ಜಯನಗರ), ಜಿ. ನಾರಾಯಣ ಕುಮಾರ್ (ಜಿ.ಪಿ.ನಗರ) ಹಾಗೂ ಕಿ.ರಂ. ನಾಗರಾಜ (ಆರ್. ವಿ. ಕಾಲೇಜು) ಮೆಟ್ರೋ ನಿಲ್ದಾಣಗಳಿಗೆ ಈ ಹೆಸರುಗಳನ್ನು ನಾಮಕರಣ ಮಾಡಬೇಕೆಂದು ಮನವಿ ಮಾಡಿದ್ದರು.