ಜಿಲ್ಲೆ

ಸಾಹಿತ್ಯದಿಂದ ವ್ಯಕ್ತಿತ್ವದ ಬೆಳವಣಿಗೆ ಸಾಧ್ಯ

ಡಾ.ನಿಕೇತನಾ ಅಭಿಪ್ರಾಯ

ಸಾಹಿತ್ಯ ವೇದಿಕೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಸಾಹಿತ್ಯಕ್ಕೆ ಸಂಬಂಧಿತ ವೇದಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಓದುವ ಆಸಕ್ತಿ, ಬರೆಯುವ ಕೌಶಲ ಮತ್ತು ಸಾಹಿತಿಗಳ ಮಾತಿನ ಮಾದರಿಯ ಅರಿವುಂಟಾಗುತ್ತದೆ. ಅಲ್ಲದೆ ನಮ್ಮೊಳಗಿನ ಕವಿ, ಲೇಖಕ, ಚಿಂತಕ, ವಿಮರ್ಶಕನನ್ನು ಜಾಗೃತಗೊಳಿಸುವ ಅವಕಾಶವೂ ಲಭಿಸುತ್ತದೆ. ವ್ಯಕ್ತಿತ್ವದ ಸರ್ವಾಂಗೀಣ ಬೆಳವಣಿಗೆಗೆ ಸಾಹಿತ್ಯ ಸಹಕಾರಿಯಾಗುತ್ತದೆ ಎಂದು ಡಾ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ನಿಕೇತನಾ ಅಭಿಪ್ರಾಯಪಟ್ಟರು.

ಉಡುಪಿಯ ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ಟಿ.ಮೋಹನ ದಾಸ್​ ಪೈ ಅಮೃತ ಸೌಧ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತ್ಯ ವೇದಿಕೆ ಉದ್ಘಾಟಿಸಿ ಮಾತನಾಡಿದರು.

ವೇದಿಕೆಯಲ್ಲಿ ಸಾಹಿತ್ಯ ವೇದಿಕೆಯ ಕಾರ್ಯದರ್ಶಿ ಅನುಪಮಾ ಎಚ್​. ನಾಯ್ಕ ಉಪಸ್ಥಿತರಿದರು. ಕಾರ್ಯಕ್ರಮದ ಸಂಯೋಜಕಿ ಕನ್ನಡ ವಿಭಾಗದ ಉಪನ್ಯಾಸಕಿ ದೀಪಿಕಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕನ್ನಡ ಉಪನ್ಯಾಸಕಿ ಅಕ್ಷತಾ ಎಂ.ಜಿ. ವಂದಿಸಿದರು. ದಿಶಾ ರಾವ್​ ಕಾರ್ಯಕ್ರಮ ನಿರೂಪಿಸಿದರು.

ಸೃಜನಾತ್ಮಕ ಚಿಂತನೆಗೆ, ಭಾಷಾ ಅಭಿವ್ಯಕ್ತಿಗೆ ಮತ್ತು ಮಾನವೀಯ ಮೌಲ್ಯಗಳ ಅರಿವಿಗೆ ಸಾಹಿತ್ಯ ವೇದಿಕೆಗಳು ಮಾರ್ಗ ತೋರಲಿವೆ. ಸಾಹಿತ್ಯವು ಮನಸ್ಸಿಗೆ ನವ ಚೈತನ್ಯ ತುಂಬುತ್ತವೆ. ಬದುಕನ್ನು ಹೇಗೆ ನೋಡಬೇಕು? ಹೇಗೆ ಅರ್ಥಮಾಡಿಕೊಳ್ಳಬೇಕು ಎನ್ನುವುದನ್ನೂ ಸಾಹಿತ್ಯ ಕಲಿಸುತ್ತದೆ. | ಡಾ.ದೇವಿದಾಸ ಎಸ್​. ನಾಯಕ. ಕಾಲೇಜಿನ ಪ್ರಾಂಶುಪಾಲ.