ಕಂಪ್ಲಿಯಲ್ಲಿ ಜೆಸಿಐ ಸೋನಾ ಸಂಸ್ಥೆಯಿಂದ ಡಾ.ಶಿವಕುಮಾರ ಸ್ವಾಮೀಜಿ ಜಯಂತಿ ಅಚರಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ, ಸಂಸ್ಥೆ ಅಧ್ಯಕ್ಷ ಬಿ.ರಸೂಲ್, ಪದಾಧಿಕಾರಿಗಳಾದ ಸಂತೋಷ್ ಸೋಗಿ, ಶರಣಪ್ಪ ಸಜ್ಜನರ ಗಾಣಗೇರ, ಬಡಿಗೇರ ಜಿಲಾನ್ ಸಾಬ್, ಡಾ.ಭರತ್ ಪದ್ಮಶಾಲಿ, ಮನೋಜ್ ಕುಮಾರ್ ದಾನಪ್ಪ ಇತರರಿದ್ದರು. 
ಜಿಲ್ಲೆ

ಸಾಕ್ಷರತೆಯ ಸಂತ ಶಿವಕುಮಾರ ಸ್ವಾಮೀಜಿ

Kopala - Desk - Eraveni

ಕಂಪ್ಲಿ: ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಸಾಧನೆ ಆದರ್ಶ ಹಾಗೂ ಅನುಕರಣೀಯವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಹೇಳಿದರು.

ಪಟ್ಟಣದ ಪೇಟೆ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಜೆಸಿಐ ಕಂಪ್ಲಿ ಸೋನಾ ಸಂಸ್ಥೆ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿ ಅವರ 118ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಡಾ.ಶಿವಕುಮಾರ ಸ್ವಾಮೀಜಿ ಆಹಾರ, ಆಶ್ರಯದೊಂದಿಗೆ ಶಿಕ್ಷಣ ನೀಡುವ ಮೂಲಕ ಸಾಕ್ಷರತೆಯ ಸಂತರಾಗಿದ್ದಾರೆ. ಶ್ರೀಗಳ ಸೇವೆಗೆ ಭಾರತ ರತ್ನ ಪ್ರಶಸ್ತಿ ದೊರೆಯಬೇಕಿದೆ ಎಂದರು.

ಸಂಸ್ಥೆ ಅಧ್ಯಕ್ಷ ಬಿ.ರಸೂಲ್ ಪ್ರಮುಖರಾದ ಸಂತೋಷ್ ಕೊಟ್ರಪ್ಪ ಸೋಗಿ, ಬಡಿಗೇರ ಜಿಲಾನ್‌ಸಾಬ್, ಶರಣಪ್ಪ ಸಜ್ಜನ ಗಾಣಿಗೇರ, ಮಂಜುನಾಥ ಸಜ್ಜನರ, ವಿಶ್ವನಾಥ ಸಜ್ಜನರ, ಎಸ್.ಡಿ.ಬಸವರಾಜ, ಕೆ.ಸಿ.ಸಿದ್ದರಾಮೇಶ್ವರ, ಜಿ.ಚಂದ್ರಶೇಖರಗೌಡ, ಎಸ್.ಕೆ.ಇಂತಿಯಾಜ್, ಯೂಸೂಫ್, ಕನಕರಾಯ, ಡಾ.ಭರತ್‌ಪದ್ಮಶಾಲಿ, ಡಿ.ಭರತ್, ಇಸ್ಮಾಯಿಲ್, ಎಸ್.ಎಂ.ಗುರುಪ್ರಸನ್ನ, ಮನೋಜ್ ಕುಮಾರ್ ದಾನಪ್ಪ, ವಣಿಕಿ ಶಂಕರ್, ನವೀನ್ ಬಾಗ್ರೇಚಾ ಇತರರಿದ್ದರು.