ಸಿಂಧನೂರಿನ ಶ್ರೀ ಒಳಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ಮಹಾದಾಸೋಹಿ ಕಲಬುರಗಿ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮ ನಡೆಯಿತು. ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯರು, ಪುರಾಣ ಪ್ರವಚನಕಾರ ಹಸಮಕಲ್ ಬೃಹನ್ಮಠದ ಗುರುದೇವಸ್ವಾಮಿ, ಸಂಗೀತಗಾರ ವೀರೇಶ ಸಾಲಿಮಠ, ತಬಲಾ ವಾದಕ ಬಸವರಾಜ ಮೋತಿ ಇದ್ದರು.  
ಜಿಲ್ಲೆ

ಪುರಾಣ ಕೇಳುವುದರಿಂದ ಮೂಡಲಿದೆ ಶಾಂತಿ

ನರೇಶ್ ಕುಮಾರ್

ಸಿಂಧನೂರು: ಸಾರ್ವಜನಿಕರು ಪುರಾಣ ಪ್ರವಚನ ಆಲಿಸುವುದರಿಂದ ಜ್ಞಾನ ಸಂಪನ್ನರಾಗುತ್ತಾರೆ. ಧಾರ್ಮಿಕ ಸಂಪತ್ತನ್ನು ಎಲ್ಲರೂ ಗಳಿಸಬೇಕು ಎಂದು ರಂಭಾಪುರಿ ಖಾಸಾ ಶಾಖಾಮಠದ ಸೋಮನಾಥ ಶಿವಾಚಾರ್ಯರು ಹೇಳಿದರು.

ನಗರದ ಶ್ರೀ ಒಳಕೋಟೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಮಹಾದಾಸೋಹಿ ಕಲಬುರಗಿ ಶ್ರೀ ಶರಣಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಶನಿವಾರ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯ ಸಾಂಸಾರಿಕ ತಾಪತ್ರಯ ಎನಿಸಿದಾಗ ಸಹಜವಾಗಿ ಬೇಸರ ಮೂಡುತ್ತದೆ. ಇಂಥ ಬೇಸರವನ್ನು ದೂರ ಮಾಡಿ ಶಾಂತಿ, ಸಹನೆ, ತಾಳ್ಮೆ ಮೂಡಬೇಕಾದರೆ ಪುರಾಣ ಕೇಳುವುದರಿಂದ ಸಾಧ್ಯವಾಗುತ್ತದೆ. ಪುರಾಣ ಆಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಹಸಮಕಲ್ ಬೃಹನ್ಮಠದ ಗುರುದೇವಸ್ವಾಮಿ ಪುರಾಣ ಪ್ರವಚನ ನೀಡಿದರು. ಸಂಗೀತ ವೀರೇಶ ಸಾಲಿಮಠ, ತಬಲಾ ವಾದನ ಬಸವರಾಜ ಮೋತಿ ಹಾಗೂ ದಿಲ್‌ರೂಬಾ ಆಕಾಶವಾಣಿ ಕಲಾವಿದ ಶಾಂತವೀರಯ್ಯಸ್ವಾಮಿ ನೀಡಿದರು.