ಗೊರೇಬಾಳದಲ್ಲಿ ಶ್ರೀ ಶರಣಬಸವೇಶ್ವರ ಪುರಾಣ ಪ್ರವಚನಕ್ಕೆ ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಸ್ವಾಮೀಜಿ, ಸಂತೆಕೆಲ್ಲೂರಿನ ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ ಚಾಲನೆ ನೀಡಿದರು. ಪ್ರವಚನಕಾರ ಮಣಕವಾಡಿಯ ಅಭಿನವ ಮೃತ್ಯುಂಜಯ ಸ್ವಾಮೀಜಿ, ಸಂಗೀತಗಾರ ಶಿವಲಿಂಗಯ್ಯ ಸ್ವಾಮಿ ಹಿರೇಮಠ, ತಬಲ ವಾದಕ ತೋಟೇಂದ್ರ ಕುಮಾರ್ ಗದಗ ಇದ್ದರು. 
ಜಿಲ್ಲೆ

ಪುರಾಣ ಪ್ರವಚನ ಕೇಳುವುದರಿಂದ ನೆಮ್ಮದಿ

ಗಾಯತ್ರಿ ಮಾಲಿಪಾಟೀಲ್

ಗೊರೇಬಾಳ: ಪುರಾಣ ಪ್ರವಚನ ಆಲಿಸುವುದರಿಂದ ಮನಸ್ಸಿಗೆ ನೆಮ್ಮದಿ, ಉಲ್ಲಾಸ ದೊರೆಯುತ್ತದೆ ಎಂದು ಸಂತೆಕೆಲ್ಲೂರು ಘನಮಠೇಶ್ವರ ಮಠದ ಗುರುಬಸವ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಮಾ.18, 19ರಂದು ನಡೆಯಲಿರುವ 46ನೇ ಶರಣಬಸವೇಶ್ವರ ಜಾತ್ರೋತ್ಸವ ಹಾಗೂ ಚನ್ನಬಸವ ತಾತನ 19ನೇ ವರ್ಷದ ರಥೋತ್ಸವ ನಿಮಿತ್ತ ಮಂಗಳವಾರ ಶರಣಬಸವೇಶ್ವರ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರವಚನಕಾರ ಮಣಕವಾಡಿಯ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಈ ಗ್ರಾಮ ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ ದ್ವಿತೀಯ ಕ್ಷೇತ್ರವಾಗಿದೆ. ಭಕ್ತರು ದೇವ ಮಾನವರ ಅಧ್ಯಾತ್ಮದ ಮೂಲ ಹಾಗೂ ಚಿಂತನಾ ಮನೋಭಾವ ಅರಿಯುವ ಮೂಲಕ ಸಂಪ್ರದಾಯವನ್ನು ಪಾಲಿಸಬೇಕು ಎಂದರು. ಸುವರ್ಣಗಿರಿ ವಿರಕ್ತಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿದರು. ಬೆಳಗ್ಗೆ ಗ್ರಾಮ ದೇವತೆ ದ್ಯಾವಮ್ಮ, ಕಾಳಿಕಾದೇವಿ, ಕೆಂಚಮ್ಮ ದುರ್ಗಮ್ಮ ಹಾಗೂ ಸಂಕಲಮ್ಮ ದೇವತೆಗಳಿಗೆ ಮಹಿಳೆಯರು ಉಡಿ ತುಂಬಿದರು.