ಜಿಲ್ಲೆ

23.07 ಲಕ್ಷ ರೂಪಾಯಿ ಮೌಲ್ಯದ ಮದ್ಯ ವಶ: ಕಿಂಗ್ ಫಿಷರ್ ಬಿಯರ್ ತಯಾರಿಸುವ ಕಂಪನಿ ವಿರುದ್ಧ ಪ್ರಕರಣ ದಾಖಲು

ಮೈಸೂರು: ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ 23.07 ಲಕ್ಷ ರೂ. ಮೌಲ್ಯದ ಮದ್ಯವನ್ನು ವಶಕ್ಕೆ ಪಡೆಯಲಾಗಿದೆ.


ನಂಜನಗೂಡಿನಿಂದ ಹುಣಸೂರಿಗೆ ಕಿಂಗ್ ಫಿಷರ್ ಕಂಪನಿಯ ಬಿಯರ್ ಸಾಗಣೆ ಮಾಡಲಾಗುತ್ತಿತ್ತು. ಬಿಯರ್ ಇಟ್ಟಿದ 7 ರಟ್ಟಿನ ಪೆಟ್ಟಿಗೆಗಳಲ್ಲಿ ಮೇಲೆ ಬಾರ್‌ಕೋಡ್, ಕ್ಯೂಆರ್ ಕೋಡ್, ಸ್ಟಿಕ್ಕರ್, ಕಂಟ್ರೋಲಿಂಗ್ ಭದ್ರತಾ ಚೀಟಿ ಇರಲಿಲ್ಲ.

ಈ ಪೈಕಿ ಎರಡು ರಟ್ಟಿನ ಪೆಟ್ಟಿಗೆಗಳ ಬಾರ್ ಕೋಡ್ ಇದ್ದರೂ ಅವುಗಳು ಮಿಸ್ ಮ್ಯಾಚ್ ಆಗಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಹುಣಸೂರು ಉಪವಿಭಾಗದ ಅಬಕಾರಿ ನಿರೀಕ್ಷಕಿ ಡಿ.ಗೀತಾ ಅವರು ನಂಜನಗೂಡಿನ ಯುನೈಟೆಡ್ ಬ್ರೀವರೀಸ್ ಕಂಪನಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.


ಚುನಾವಣೆ ನೀತಿ ಸಂಹಿತೆ ಜಾರಿಯಾದ ಮಾ.16ರಿಂದ 29 ರವರೆಗೆ ಮೈಸೂರು ಗ್ರಾಮಾಂತರ ಜಿಲ್ಲೆಯ ಅಬಕಾರಿ ಇಲಾಖಾ ವತಿಯಿಂದ ಅಕ್ರಮ ಮದ್ಯ ಚಟುವಟಿಕೆಗಳನ್ನು ಪತ್ತೆ ಹಚ್ಚಿ ಅಬಕಾರಿ ಕಾನೂನಿನನ್ವಯ 148 ಮೊಕದ್ದಮೆ ದಾಖಲಿಸಿದೆ.

ಮದ್ಯ, ಬಿಯರ್‌ನೊಂದಿಗೆ 18 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟಾರೆ ಮೌಲ್ಯ 8.36 ಕೋಟಿ ರೂ. ಆಗಿದೆ ಎಂದು ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.