ಜಿಲ್ಲೆ

ಮದ್ಯದ ಅಂಗಡಿಯಲ್ಲಿ ಕಳವು

ಎಂ.ಎಸ್​.ಹಿರೇಮಠ ಬೆಳಗಾವಿ

ರಾಮದುರ್ಗ: ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ಎಂಎಸ್​ಐಎಲ್​ ಮದ್ಯದ ಅಂಗಡಿಯ ಬೀಗ ಮುರಿದ ದುಷ್ಕರ್ಮಿಗಳು ಸುಮಾರು 5 ಲ ರೂ. ಮೌಲ್ಯದ ಮದ್ಯದ ಬಾಟಲಿಗಳನ್ನು ದೋಚಿದ್ದಾರೆ. ಅಂಗಡಿಯಲ್ಲಿದ್ದ ಸಿ.ಸಿ. ಕ್ಯಾಮರಾ, ಡಿವಿಆರ್​ಗಳನ್ನು ಕೂಡ ಕಳ್ಳರು ಕದ್ದೊಯ್ದಿದ್ದಾರೆ. ಟನಾ ಸ್ಥಳಕ್ಕೆ ರಾಮದುರ್ಗ ಪಿಎಸ್​ಐ ಸವಿತಾ ಮುನ್ಯಾಳ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಸ್ಥಳಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.