ಜಿಲ್ಲೆ

ಮದ್ಯಪಾನ, ಮಾರಾಟ ನಿಷೇಧ

ದೀಪಕ ತಲವಾಯಿ

ಧಾರವಾಡ: ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮದ್ಯಪಾನ, ಮದ್ಯ ಮತ್ತು ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಆದೇಶ ಹೊರಡಿಸಿದ್ದಾರೆ. ಸೆ. 10ರ ರಾತ್ರಿ 11.59ರಿಂದ ಸೆ. 12ರ ಬೆಳಗ್ಗೆ 6ರವರೆಗೆ ಮತ್ತು ಸೆ. 12ರ ರಾತ್ರಿ 11.59ರಿಂದ 14ರ ಬೆಳಗ್ಗೆ 6ರವರೆಗೆ ಹಾಗೂ ಸೆ. 14ರ ರಾತ್ರಿ 11.59ರಿಂದ ಸೆ. 18ರ ಬೆಳಗ್ಗೆ 6ರವರೆಗೆ ಜಿಲ್ಲೆಯಾದ್ಯಂತ (ಹುಬ್ಬಳ್ಳಿ- ಧಾರವಾಡ ಮಹಾನಗರ ಹೊರತುಪಡಿಸಿ) ಮದ್ಯಪಾನ, ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಲಾಗಿದೆ. ಅಬಕಾರಿ ಇಲಾಖೆ ಅಧಿಕಾರಿಗಳು ಆದೇಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.