ಜಿಲ್ಲೆ

ಸಿಂಹಗಳ ಓಡಾಟದ ವಿಡಿಯೋ ಸುಳ್ಳು

ಉತ್ತರ ಕನ್ನಡ ಡೆಸ್ಕ್

ರಟ್ಟಿಹಳ್ಳಿ: ಕಳೆದ ಐದಾರು ದಿನಗಳಿಂದ ತಾಲೂಕಿನ ಮಾಸೂರು ತಿಪ್ಪಾಯಿಕೊಪ್ಪ ಪೆಟ್ರೋಲ್ ಬಂಕ್ ಬಳಿ ಮತ್ತು ರಟ್ಟಿಹಳ್ಳಿ ತಾಲೂಕಿನ ಕೆಲವು ರಸ್ತೆಗಳಲ್ಲಿ ಸಿಂಹಗಳ ಹಿಂಡು ಓಡಾಡುತ್ತಿವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನು ವೈರಲ್ ಮಾಡಲಾಗುತ್ತಿದೆ. ಆದರೆ, ಈ ಎಲ್ಲ ವಿಡಿಯೋಗಳು ಸುಳ್ಳು ಸುದ್ದಿ ಎಂದು ಉಪವಲಯ ಅರಣ್ಯಾಧಿಕಾರಿ ಸಂತೋಷ ಆವಕ್ಕನವರ ಸ್ಪಷ್ಟಪಡಿಸಿದ್ದಾರೆ.

ರಾಜ್ಯದಲ್ಲಿ ಕೆಲವು ಪ್ರಾಣಿ ಸಂಗ್ರಾಹಲಯ ಹೊರತುಪಡಿಸಿದರೆ ಯಾವುದೇ ಅರಣ್ಯ ಪ್ರದೇಶದಲ್ಲಿ ಸಿಂಹಗಳು ಕಾಣುವುದಿಲ್ಲ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮಾಸೂರು ತಿಪ್ಪಾಯಿಕೊಪ್ಪ ಬಳಿ ಪೆಟ್ರೋಲ್ ಬಂಕ್ ಹತ್ತಿರ ಸಿಂಹ ಓಡಾಡುತ್ತಿದೆ ಮತ್ತು ರಟ್ಟಿಹಳ್ಳಿ ತಾಲೂಕಿನ ಕಣವಿಸಿದ್ದಗೇರಿ ರಸ್ತೆಯಲ್ಲಿ ಸಿಂಹಗಳು ಓಡಾಡುತ್ತಿವೆ ಎಂದು ವಿಡಿಯೋಗಳನ್ನು ಹರಿಬಿಟ್ಟಿದ್ದಾರೆ. ಆದರೆ, ಇದು ಸಂಪೂರ್ಣ ಸುಳ್ಳು ಸುದ್ದಿಯಾಗಿದೆ. ಗುಜರಾತ್​ನ ಗೀರ ಅಭಿಯಾರಣ್ಯದಲ್ಲಿ ಈ ಸಿಂಹಗಳ ದೃಶ್ಯವಾಗಿದ್ದು, ತಾಲೂಕಿನ ಗ್ರಾಮಸ್ಥರು ಯಾವುದೇ ಆತಂಕ ಪಡುವ ಆಗತ್ಯ ಇಲ್ಲ ಎಂದು ‘ವಿಜಯವಾಣಿ’ಗೆ ಅರಣ್ಯಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.