ಸರಗೂರು ಪಟ್ಟಣದ ಲಯನ್ಸ್ ಅಕಾಡಮಿ ಶಾಲೆಯಲ್ಲಿ ಇತ್ತೀಚೆಗೆ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎನ್.ಕೃಷ್ಣೇಗೌಡ, ಎಸ್.ಬಿ.ನಾಗರಾಜು, ಡಿ.ಟಿ.ಜಯರಾಮಯ್ಯ, ಡಾ.ಆರ್.ಸುಜಾತಾ ಇತರರು ಇದ್ದರು. 
ಜಿಲ್ಲೆ

ಸಮಾಜ ಸುಧಾರಣೆಯಲ್ಲಿ ಲಯನ್ಸ್ ಪಾತ್ರ ಗಮನಾರ್ಹ

ವಸಂತಕುಮಾರ್ ಬಿ

ಸರಗೂರು: ಪಟ್ಟಣದ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಕಾರ್ಯಕ್ರಮ ಹಾಗೂ ವೈದ್ಯರ ದಿನಾಚರಣೆಯನ್ನು ಇತ್ತೀಚೆಗೆ ಲಯನ್ಸ್ ಅಕಾಡಮಿ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.

ಲಯನ್ಸ್‌ನ ನಿಕಟ ಪೂರ್ವ ಜಿಲ್ಲಾ ಪ್ರಾಂತಪಾಲ ಎನ್.ಕೃಷ್ಣೇಗೌಡ ಈ ವೇಳೆ ಲಯನ್ಸ್ ಸಂಸ್ಥೆಯ ನೂತನ ಪದಾಧಿಕಾರಿಗಳು ಪದಗ್ರಹಣವನ್ನು ನೆರವೇರಿಸಿದರು.

ಬಳಿಕ ಮಾತನಾಡಿ, ಸಮಾಜ ಸುಧಾರಣೆಯಲ್ಲಿ ಲಯನ್ಸ್ ಸಂಸ್ಥೆ ಮಹತ್ತರ ಪಾತ್ರ ವಹಿಸಿದೆ. ನಾವು ಮಾಡುವ ಕೆಲಸಗಳು ಪರಿಪೂರ್ಣತೆಯಿಂದ ಕೂಡಿರಬೇಕು. ಅಧಿಕಾರ ವಹಿಸಿಕೊಂಡಾಗ ಇರುವ ಜವಾಬ್ದಾರಿ ಪದತ್ಯಾಗ ಮಾಡಿದಾಗಲೂ ಇರಬೇಕು. ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು. ಮುಂದಿನ ಪೀಳಿಗೆಗೂ ಆದರ್ಶವಾಗಬೇಕು ಎಂದು ಸಲಹೆ ನೀಡಿದರು.

ಅದಿಕಾರ ಸ್ವೀಕರಿಸಿದ ಲಯನ್ಸ್ ಸಂಸ್ಥೆ ಅಧ್ಯಕ್ಷ ಎಸ್.ಬಿ. ನಾಗರಾಜು ಮಾತನಾಡಿ, ನನಗೆ ಸಿಕ್ಕಿದ ಅವಕಾಶದಲ್ಲಿ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳ ಜತೆಗೆ ಉತ್ತಮ ಕೆಲಸ ಮಾಡುತ್ತೇನೆ ಎಂದರು.

ವೈದ್ಯ ದಿನಾಚರಣೆ ಪ್ರಯುಕ್ತ ಆರೋಗ್ಯ ಕ್ಷೇತ್ರದಲ್ಲಿ ಸಾಧನೆಗೈದ ಮೈಸೂರಿನ ಪಶುವೈದ್ಯಾಧಿಕಾರಿ ಡಿ.ಟಿ.ಜಯರಾಮಯ್ಯ ಹಾಗೂ ಸರಗೂರಿನ ವೈದ್ಯಾಧಿಕಾರಿ ಡಾ. ಆರ್.ಸುಜಾತಾ ಅವರನ್ನು ಗೌರವಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಎಸ್.ಪ್ರತಾಪ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಸ್. ಎಸ್.ಪ್ರಭುಸ್ವಾಮಿ, ಎಸ್.ಬಿ.ಬ್ರಹ್ಮದೇವಯ್ಯ, ಎಸ್.ವಿ.ಯೋಗೀಶ್, ಕೆ.ಸುರೇಶ್ ಜೈನ್, ಎಸ್.ನಾರಾಯಣ್, ಎಸ್.ಎನ್.ಮೋಹನ್ ಕುಮಾರ್, ಎಂ.ಕೆ.ಹರಿದಾಸ್, ಎಸ್.ಪಿ.ಪ್ರಸಾದ್, ಜಿಪಂ ಮಾಜಿ ಸದಸ್ಯ ಪಿ.ರವಿ, ಲಯನ್ಸ್ ಅಕಾಡೆಮಿ ಶಾಲೆ ಪ್ರಾಂಶುಪಾಲ ದಾಸಾಚಾರ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆಂಡಗಣ್ಣಸ್ವಾಮಿ, ಜಿ.ರವಿ, ಬಿ.ಸಿ.ಎಂ.ಸ್ವಾಮಿ, ಶಿವಪುರ ಜಯಕುಮಾರ್ ಇತರರು ಇದ್ದರು.