ಹೊಸಕೋಟೆ ಲಯನ್ಸ್ ಸಂಸ್ಥೆ ವತಿಯಿಂದ ಶನಿವಾರ ಪತ್ರಿಕಾ ವಿತರಕರಿಗೆ ರೈನ್‌ಕೋಟ್ ವಿತರಣೆ ಮಾಡಲಾಯಿತು.ಲಯನ್ಸ್ ಜಿಲ್ಲಾ ಸೇವಾ ಕಾರ್ಯಗಳ ಅಧಿಕಾರಿ ಅಜಿತ್ ಬಾಬು, ಅಧ್ಯಕ್ಷ ಬೀರಪ್ಪ, ಉಪಾಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಮಂಜುನಾಥ್, ಖಜಾಂಚಿ ಜಿ.ಎಸ್.ಮಂಜುನಾಥ್, ಮಾಜಿ ಅಧ್ಯಕ್ಷರಾದ ವೆಂಕಟಸ್ವಾಮಿ, ಮಹೇಶ್, ಹಿರಿಯ ಸದಸ್ಯ ಕೆ.ಮಂಜುನಾಥ್ ಇತರರಿದ್ದರು. 
ಜಿಲ್ಲೆ

ದುಡಿಯುವ ವರ್ಗಕ್ಕೆ ಸಹಾಯಹಸ್ತ

ಶಿವರಾಜ.ಎಂ

ಹೊಸಕೋಟೆ: ಪ್ರತಿದಿನ ಮಳೆ, ಬಿಸಿಲು, ಚಳಿ ಎನ್ನದೆ ಪತ್ರಿಕಾ ವಿತರಕರು ಮನೆ-ಮನೆಗೆ ತೆರಳಿ ಪತ್ರಿಕೆ ವಿತರಿಸುವ ಕೆಲಸ ಶ್ಲಾಘನೀಯ ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ ಸೇವಾ ಕಾರ್ಯಗಳ ಅಧಿಕಾರಿ ಅಜಿತ್ ಬಾಬು ತಿಳಿಸಿದರು.
ನಗರದ ಲಯನ್ಸ್ ಸಂಸ್ಥೆಯ ಸಭಾಂಗಣದಲ್ಲಿ ಪತ್ರಿಕಾ ವಿತರಕರಿಗೆ ಲಯನ್ಸ್ ಸಂಸ್ಥೆ ವತಿಯಿಂದ ರೈನ್‌ಕೋಟ್ ವಿತರಿಸಿ ಮಾತನಾಡಿ, ಕಷ್ಟಪಟ್ಟು ದುಡಿಯುವ ಪೌರಕಾರ್ಮಿಕರಿಗೆ ಹಾಗೂ ಪ್ರತಿನಿತ್ಯ ಮನೆಗೆ ಪತ್ರಿಕೆ ವಿತರಿಸುವವರಿಗೆ ಅನುಕೂಲವಾಗುವಂತೆ ರೈನ್‌ಕೋಟ್ ವಿತರಣೆಗೆ ಮುಂದಾಗಿದ್ದು, ಈ ವರೆಗೆ ಸುಮಾರು 4 ಸಾವಿರಕ್ಕೂ ಹೆಚ್ಚು ರೈನ್‌ಕೋಟ್ ವಿತರಿಸಲಾಗಿದೆ ಎಂದರು.
ಹೊಸಕೋಟೆ ಲಯನ್ಸ್ ಅಧ್ಯಕ್ಷ ಬೀರಪ್ಪ ಮಾತನಾಡಿ, ಸಮಾಜದ ಎಲ್ಲ ವರ್ಗದ ಬಡ ಹಾಗೂ ದುಡಿಯುವ ಜನಾಂಗಕ್ಕೆ ಸಹಾಯಹಸ್ತ ಚಾಚುತ್ತಿದ್ದು, ಪ್ರಪಂಚವ್ಯಾಪಿ ಈ ಕಾರ್ಯ ನಡೆಯುತ್ತಿದೆ ಎಂದರು.
25ಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ರೈನ್‌ಕೋಟ್ ವಿತರಿಸಲಾಯಿತು.