ಹುಬ್ಬಳ್ಳಿ: ಸಮಾಜದಲ್ಲಿರುವ ಬಡವರು ಹಾಗೂ ಶೋಷಿತರ ಕಣ್ಣೀರು ಒರೆಸಲು ಲಯನ್ಸ್ ಕ್ಲಬ್ ಸದಾ ಸಿದ್ಧವಿದೆ. ಸಮಾಜದ ಅಭ್ಯುದಯಕ್ಕೆ ಲಯನ್ಸ ಕ್ಲಬ್ ಶ್ರಮಿಸುತ್ತಿದೆ ಎಂದು ಜಿಲ್ಲಾ 317ರ ಗವರ್ನರ್ ಮನೋಜ್ ಮಾನೆಕ್ ಹೇಳಿದರು.
ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಲಯನ್ಸ್ ‘ಆಶಾದೀಪ್ ಜಿಲ್ಲಾ ಲಯನ್ಸ್ ಸಂಪುಟ ಮತ್ತು ಪದಗ್ರಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಅಂತಾರಾಷ್ಟ್ರೀಯ ಸಂಸ್ಥೆ. ಇಂತಹ ಗೌರವಪೂರ್ವಕ ಸಂಸ್ಥೆಯ ಸದಸ್ಯರಾಗಿರುವುದು ಪುಣ್ಯ. ನಿಸ್ವಾರ್ಥ ಸೇವೆಗೆ ಇಲ್ಲಿ ಪ್ರಥಮ ಆದ್ಯತೆ. ಸಂಸ್ಥೆಯ ಬೆಳವಣಿಗೆಗೆ ಪೂರಕ ಚಟುವಟಿಕೆ ಆಯೋಜಿಸಲಾಗುತ್ತಿದೆ. ಸ್ಥಳೀಯ ಸಮಸ್ಯೆ ಸರಿಪಡಿಸಲು ಪ್ರಾಮುಖ್ಯತೆ ನೀಡಲಾಗಿದೆ. ಸ್ವಚ್ಛತೆ, ಹಸಿವು ಮುಕ್ತ ಸಮಾಜ ನಿರ್ಮಾಣ, ಪರಿಸರ ಸಂರಕ್ಷಣೆ, ಚಿಕ್ಕ ಮಕ್ಕಳಲ್ಲಿ ಆವರಿಸುತ್ತಿರುವ ಕ್ಯಾನ್ಸರ್ ರೋಗದ ಮುನ್ನೆಚ್ಚರಿಕೆ ಕ್ರಮ ಸೇರಿ ಹಲವಾರು ಉಪಯುಕ್ತ ಕಾರ್ಯಕ್ರಮಗಳನ್ನು ಸಂಸ್ಥೆ ಮಾಡುತ್ತ ಸಾಗಿದೆ ಎಂದರು.
ಅಂತಾರಾಷ್ಟ್ರೀಯ ನಿರ್ದೇಶಕ ಪಿಎಂಜೆಎಫ್ ಪಂಕಜ್ ಮೆಹ್ತಾ ಅವರು ಪದಾಧಿಕಾರಗಳಿಗೆ ಪ್ರಮಾಣ ವಚನ ಬೋಧಿಸಿದರು.
ಜಯಮೋಲ್ ನಾಯಕ್, ರಾಜಶೇಖರ್ ಹಿರೇಮಠ, ವಿನೋದ್ ಜೈನ್, ಅನಿಲ್ ದೇಸಾಯಿ, ಉದಯ್ ಬಾಡ್ಕರ್, ಡಾ. ನಿತೇಶ ಜೈನ್, ಭಾಸ್ಕರ್ ಶೋಲಾಪುರಕರ್, ಲಿಯೋ ಸುಶ್ಮಿತಾ ಕ್ಯಾಸ್‌ಲಿಯೋ ಅವರನ್ನು ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಲಾಯಿತು.