ಮಂಡ್ಯ: ಸ್ನೇಹ ಮತ್ತು ಸೇವೆಯೇ ಲಯನ್ಸ್ ಸಂಸ್ಥೆಗಳ ಮುಖ್ಯಧ್ಯೇಯವಾಗಿದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.
ನಗರದ ಸೇವಾಕಿರಣ ಸಭಾಂಗಣದಲ್ಲಿ ಕನಕನಗರ ಲಯನ್ಸ್ ಸಂಸ್ಥೆ ಬೆಂಗಳೂರು ಜಿಲ್ಲೆ 317ಎಫ್ ಹಾಗೂ ಕೃಷಿಕ ಲಯನ್ಸ್ ಸಂಸ್ಥೆ ಮಂಡ್ಯ 317ಜಿ ಸಹಯೋಗದಲ್ಲಿ ಆಯೋಜಿಸಿದ್ದ ಆಶ್ರಮ ನಿವಾಸಿಗಳಿಗೆ ಹೊದಿಕೆ ಮತ್ತು ಅಗತ್ಯ ಪರಿಕರಗಳ ವಿತರಣೆ, ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ವಿಶ್ವದ ಎಲ್ಲ ರಾಷ್ಟಗಳಲ್ಲೂ ಲಯನ್ಸ್ ಸಂಸ್ಥೆಗಳು ವಿವಿಧ ಸೇವಾ ಕಾರ್ಯಗಳನ್ನು ಮಾಡುತ್ತಿವೆ. ಶೈಕ್ಷಣಿಕವಾಗಿ ನೆರವು, ಪರಿಸರ, ಆರೋಗ್ಯ, ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿವೆ ಎಂದು ನುಡಿದರು.
ಇಂದಿನ ಕಾಲಘಟ್ಟದಲ್ಲಿ ಹಿರಿಯ ಚೇತನಗಳನ್ನು ಸರಿಯಾಗಿ ನಡೆಸಿಕೊಳ್ಳದೆ ಕಡೆಗಣಿಸಲಾಗುತ್ತಿದೆ. ಹಣವಂತರೇ ಹೆಚ್ಚು ಹಿರಿಯರನ್ನು ಕಡೆಗಣಿಸಲಾಗುತ್ತಿದೆ. ಹಿಂದೆ ಅಜ್ಜ-ಅಜ್ಜಿಯನ್ನು ಹೆಚ್ಚು ಆಪ್ತತೆಯಿಂದ ನೋಡಿಕೊಳ್ಳುತ್ತಿದ್ದರು. ಅವರೊಟ್ಟಿಗೆ ಮಕ್ಕಳು, ಮೊಮ್ಮಕ್ಕಳು ಇರುತ್ತಿದ್ದರು. ಇಂದಿನ ಮಕ್ಕಳಿಗೆ ಆ ಸೌಭಾಗ್ಯ ಇಲ್ಲದಾಗುತ್ತಿದೆ ಎಂದು ಬೇಸರಿಸಿದರು.
ಕನಕ ನಗರ ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ನಾಗರಾಜ್‌ಶೆಟ್ಟಿ, ಕಾರ್ಯದರ್ಶಿ ಪ್ರಭಾಕರ್, ಖಜಾಂಚಿ ಸುರೇಶ್, ರಂಗಸ್ವಾಮಿ, ಉಮಾಶಂಕರ್, ಸುರೇಶ್, ಮೋಹನ್‌ಕುಮಾರ್, ನೀನಾ ಪಟೇಲ್, ಪ್ರತಿಭಾಂಜಲಿ ಡೇವಿಡ್, ಹೊಂಬೇಗೌಡ, ಆಶ್ರಮದ ವ್ಯವಸ್ಥಾಪಕ ರಾಜಣ್ಣ ಇತರರಿದ್ದರು.