ಮೂಲ್ಕಿ: ಮೂಲ್ಕಿಯ ಹಿರಿಯ ವೈದ್ಯರಲ್ಲಿ ಒಬ್ಬರಾಗಿ ಚೇತನಾ ಆಸ್ಪತ್ರೆ ಸ್ಥಾಪಿಸಿ ಗ್ರಾಮೀಣ ಬಡ ವರ್ಗದ ರೋಗಿಗಳ ಆಶಾಕಿರಣವಾಗಿ ಬಳಿಕ ಉಚಿತ ವೈದ್ಯಕೀಯ ಸಲಹೆ ನೀಡುವ ಮೂಲಕ ಜನ ಸೇವೆ ಮಾಡುವುದರೊಂದಿಗೆ 48 ವರ್ಷ ಲಯನ್ಸ್ ಸಂಸ್ಥೆಯೊಂದಿಗೆ ಸೇವೆ ನೀಡಿದ ಡಾ.ಸುರೇಶ್ ಅರಾಹ್ನ ಮತ್ತು ಡಾ.ನೀಲಾ ಅರಾಹ್ನ ಅಭಿನಂದನೀಯರು ಎಂದು ಮೂಲ್ಕಿ ಲಯನ್ಸ್ ಅಧ್ಯಕ್ಷ ಹರ್ಷರಾಜ ಶೆಟ್ಟಿ ಜಿ.ಎಂ. ಹೇಳಿದರು.
ವಿಶ್ವ ಹಿರಿಯರ ದಿನಾಚರಣೆ ಪ್ರಯುಕ್ತ ಸಾಧಕರ ನೆಲೆಯಲ್ಲಿ ಡಾ.ಸುರೇಶ್ ಅರಾಹ್ನ ಮತ್ತು ಡಾ.ನೀಲಾ ಅರಾಹ್ನ ಗೌರವಿಸಿ ಮಾತನಾಡಿದರು.
ಸುಶೀಲ್ ಬಂಗೇರಾ, ಶೀತಲ್ ಸುಶೀಲ್, ಲತಾ ಶೇಖರ್, ಶೇಖರ್ ಕೊಳಚಿಕಂಬಳ, ಸದಾಶಿವ ಹೊಸದುರ್ಗ, ಉದಯ ಅಮೀನ್ ಮಟ್ಟು, ಶೋಭಾ ಸುಜೀತ್, ಸುಜಿತ್ ಸಾಲ್ಯಾನ್, ಉದಯಕುಮಾರ್ ಶೆಟ್ಟಿ ಮತ್ತಿತರರಿದ್ದರು.