ಲಿಂಗಸುಗೂರಲ್ಲಿ ಲಯನ್ಸ್ ಕ್ಲಬ್ ನೂತನ ಅಧ್ಯಕ್ಷ ಸಿದ್ದರಾಮಪ್ಪ ಕಾಡ್ಲೂರು, ಕಾರ್ಯದರ್ಶಿ ನಾಗರಾಜ ಗಸ್ತಿ, ಖಜಾಂಚಿ ಡಾ. ಚಂದ್ರಶೇಖರ ಅವರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ಶರಣಬಸವ ಮೇಟಿ, ವಿನಯಕುಮಾರ ಗಣಾಚಾರಿ, ಅರುಣಕುಮಾರ ಖಂಡೇಲವಾಲ, ಗವಿಸಿದ್ದಪ್ಪ ಮುದಗಲ್ಲ, ಡಾ. ಶಿವಶರಣಪ್ಪ ಇತ್ಲಿ, ಬಿ.ಎಲ್.ಶೆಟ್ಟಿ, ಕೆ.ನಾಗಭೂಷಣ ಇತರರಿದ್ದರು.  
ಜಿಲ್ಲೆ

ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ

ಲಿಂಗಸುಗೂರು: ಪಟ್ಟಣದ ಶ್ರೀ ಉಮಾ ಮಹೇಶ್ವರಿ ಪಿಯು ಕಾಲೇಜಿನಲ್ಲಿ ಭಾನುವಾರ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.

ಬಾಗಲಕೋಟೆಯ ಡಾ.ವಿಕಾಸ್ ದಡ್ಡೆಣ್ಣನವರ್ ನೀತಿ ಬೋಧನೆ ಮಾಡಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಹೇಶ ದರ್ಬಾರ್ ಪ್ರಮಾಣ ವಚನ ಬೋಧಿಸಿದರು.

2025-26ನೇ ಸಾಲಿಗೆ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸಿದ್ರಾಮಪ್ಪ ಕಾಡ್ಲೂರು, ಕಾರ್ಯದರ್ಶಿ ನಾಗರಾಜ ಗಸ್ತಿ ವಕೀಲರು, ಖಜಾಂಚಿ ಡಾ.ಚಂದ್ರಶೇಖರ ನಾಗಲಿಕರ ಅವರು ಅಧಿಕಾರ ವಹಿಸಿಕೊಂಡರು. ಶರಣಬಸವ ಮೇಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿನಯಕುಮಾರ ಗಣಾಚಾರಿ, ಅರುಣಕುಮಾರ ಖಂಡೇಲವಾಲ, ಗವಿಸಿದ್ದಪ್ಪ ಮುದಗಲ್ಲ, ಡಾ. ಶಿವಶರಣಪ್ಪ ಇತ್ಲಿ, ಡಾ. ಮಲ್ಲಿಕಾರ್ಜುನ ಇತ್ಲಿ, ಬಿ.ಎಲ್.ಶೆಟ್ಟಿ, ಕೆ.ನಾಗಭೂಷಣ, ಸಂಜೀವಕುಮಾರ ಕಂದಗಲ್ಲ ಇತರರಿದ್ದರು.