ಜಿಲ್ಲೆ

ರೇವಂತ್‌ಗೆ ಜಿಲ್ಲಾ ಲಯನ್ಸ್ ಸಂಸ್ಥೆಗಳಿಂದ 30 ಸಾವಿರ ರೂ ವಿತರಣೆ: ಆಲ್ ಇಂಡಿಯಾ ಯೂನಿರ್ವಸಿಟಿ ದೇಹದಾರ್ಢ್ಯ ಸ್ಪರ್ಧೆಗೆ ಆಯ್ಕೆಯಾಗಿರುವ ಪಟು

reportermys

ಮದ್ದೂರು: ಮಂಗಳೂರಿನಲ್ಲಿ ಆಯೋಜಿಸಿರುವ ಆಲ್ ಇಂಡಿಯಾ ಯೂನಿರ್ವಸಿಟಿ ದೇಹದಾರ್ಢ್ಯ ಸ್ಪರ್ಧೆಗೆ ಆಯ್ಕೆಯಾಗಿರುವ ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನ ವಿ.ರೇವಂತ್‌ಗೆ ಮಂಡ್ಯ ಜಿಲ್ಲಾ ಲಯನ್ಸ್ ಸಂಸ್ಥೆಗಳಿಂದ 30 ಸಾವಿರ ರೂ.ವಿತರಣೆ ಮಾಡಲಾಯಿತು.

ಜ.13ರ ವಿಜಯವಾಣಿ ಪತ್ರಿಕೆಯಲ್ಲಿ ದೇಹದಾರ್ಢ್ಯದಲ್ಲಿ ಜಿಲ್ಲೆಯ ರೇವಂತ್ ಸಾಧನೆ ಶೀರ್ಷಿಕೆಯಡಿ ಪ್ರಕಟವಾದ ವಿಶೇಷ ವರದಿಯಿಂದ ವಿ.ರೇವಂತ್‌ಗೆ ಆರ್ಥಿಕ ಸಹಾಯ ಮಾಡಲಾಗಿದೆ. ಮಂಡ್ಯ ಜಿಲ್ಲಾ ಲಯನ್ಸ್ ಸಂಸ್ಥೆಗಳಿಂದ 317ರ ಜಿಲ್ಲೆಗೆ ಆಯ್ಕೆಯಾಗಿರುವ ಗವರ್ನರ್ ತಂಡಕ್ಕೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ರೇವಂತ್‌ಗೆ ಧನಸಹಾಯ ಮಾಡಲಾಯಿತು. ಅಂತಾರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಮಾಜಿ ನಿರ್ದೇಶಕ ವಿ.ವಿ.ಕೃಷ್ಣರೆಡ್ಡಿ, ಪ್ರಾಂತಪಾಲ ಕೆ.ದೇವೇಗೌಡ, ಮೊದಲನೇ ಪ್ರಾಂತಪಾಲ ಎನ್.ಸುಬ್ರಮಣ್ಯ, ಎರಡನೇ ಉಪ ಪ್ರಾಂತಪಾಲ ಕೆ.ಎಲ್.ರಾಜಶೇಖರ ಹಾಗೂ ಎಂ.ಎಚ್.ಚನ್ನೇಗೌಡ, ವಿದ್ಯಾಸಂಸ್ಥೆ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಇದ್ದರು.