ಗದಗ ಲಾಯನ್ಸ್​ ಕ್ಲಬ್​ ನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರನ್ನು ಸನ್ಮಾನಿಸಲಾಯಿತು. ಅಶ್ವಿನಿ ನೀಲಗುಂದ, ಅನಿತಾ ಹೆಬಸೂರ, ಮಂಜುಳಾ ಶಿವಪ್ಪಗೌಡ್ರ, ರೂಪಾ ಉತ್ತರಕರ, ವೀಣಾ ಸುಲಾಖೆ, ವಿಜಯಲಕ್ಷಿ$್ಮ ಹೊಳಗುಂದಿ, ಅಪರ್ಣಾ ತೋಟದ, ರಮೇಶ ಶಿಗ್ಲಿ, ಪ್ರವಿಣ ವಾರಕರ, ರಾಜು ಮಲ್ಲಾಡದ, ಸುರೇಖಾ ಮಲ್ಲಾಡದ ಇತರರು ಇದ್ದರು. 
ಜಿಲ್ಲೆ

ಲಾಯನ್ಸ್​ ಕ್ಲಬ್​ದಲ್ಲಿ ಮಹಿಳಾ ದಿನಾಚರಣೆ

Gadag - Shivanand Hiremath

ವಿಜಯವಾಣಿ ಸುದ್ದಿಜಾಲ ಗದಗ
ಮಹಿಳೆ ಇಂದು ವಿಜ್ಞಾನ ಮತ್ತು ತಂತ್ರಜ್ಞಾನ, ವೈದ್ಯಕಿಯ, ಶಿಣ, ಕೃಷಿ, ರಾಜಕೀಯ, ಉದ್ಯಮ ಮುಂತಾದ ೇತ್ರದಲ್ಲಿ ಪುರುಷರಿಗೆ ಸಮನಾಗಿ ಸಾಧಿಸಿದ್ದಾಳೆ ಎಂದು ಲಾಯನ್ಸ್​ ಕ್ಲಬ್​ನ ಮಾಜಿ ಜಿಲ್ಲಾ ಗೌರ್ನರ್​ ಆನಂದ ಪೋತ್ನೀಸ್​ ಹೇಳಿದರು.
ನಗರದ ಲಾಯನ್ಸ್​ ಕ್ಲಬ್​ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕುಟುಂಬದಲ್ಲಿ ಪ್ರೋತ್ಸಾಹ, ಸಾಧಿಸಬೇಕೆಂಬ ಛಲ, ಅವಕಾಶಗಳು, ಶಿಣ ಮತ್ತು ಮೀಸಲಾತಿಯು ಮಹಿಳೆಯನ್ನು ಎತ್ತರದ ಸ್ಥಾನವನ್ನು ತಲುಪಿಸಿ ಸಾಧಕ ಮಹಿಳೆಯನ್ನಾಗಿ ಮಾಡಿವೆ ಎಂದರು.
ಸೌಭಾಗ್ಯ ಮಹಿಳಾ ಬ್ಯಾಂಕ್​ ಚೇರಮನ್​ ವೀಣಾ ಪೋತ್ನೀಸ್​ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕೃಷಿ ಸಾಧಕಿ ಮಂಗಳಾ ನೀಲಗುಂದ, ವೈದ್ಯಕಿಯ ಕ್ಷೇತ್ರದ ಸಾಧಕಿ ಅನುಪಮಾ ಪಾಟೀಲ, ವಿಕಲಚೇತನ ಮಕ್ಕಳ ಸೇವೆಯಲ್ಲಿ ಸಾಧನೆ ಮಾಡಿದ ಕವಿತಾ ಬೇಲೇರಿ, ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಿರಿಜಾ ಬೇವಿನಕಟ್ಟಿ, ಬ್ಯಾಂಕಿಂಗ್​ ಕ್ಷೇತ್ರದಲ್ಲಿ ಸಾಧನೆ ಮಾಡಿದ ವೀಣಾ ಪೋತ್ನೀಸ್​, ಕ್ರೀಡಾ ಸಾಧಕಿ ಸಂಜನಾ ಚಿಕ್ಕನಗೌಡ್ರ, ಪ್ರತಿಭಾನ್ವಿತ ವಿದ್ಯಾಥಿರ್ನಿ ನೇತ್ರಾ ಸುಲ್ತಾನಪೂರ ಅವರನ್ನು ಸನ್ಮಾನಿಸಲಾಯಿತು.
ಅಶ್ವಿನಿ ನೀಲಗುಂದ, ಅನಿತಾ ಹೆಬಸೂರ, ಮಂಜುಳಾ ಶಿವಪ್ಪಗೌಡ್ರ, ರೂಪಾ ಉತ್ತರಕರ, ವೀಣಾ ಸುಲಾಖೆ, ವಿಜಯಲಕ್ಷಿ$್ಮ ಹೊಳಗುಂದಿ, ಅಪರ್ಣಾ ತೋಟದ, ರಮೇಶ ಶಿಗ್ಲಿ, ಪ್ರವಿಣ ವಾರಕರ, ರಾಜು ಮಲ್ಲಾಡದ, ಸುರೇಖಾ ಮಲ್ಲಾಡದ ಇತರರು ಇದ್ದರು.